ಕುಮಟಾ : ತಾಲೂಕಿನ ಉಪನೊಂದಣಾಧಿಕಾರಿ ಕಚೇರಿ ಮತ್ತು ಮನೆಯಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ ಬಗ್ಗೆ ಇದೀಗ ವರದಿಯಾಗಿದೆ.
ಉಪನೊಂದಣಾಧಿಕಾರಿ ಕಚೇರಿ ಮತ್ತು ಮನೆಯಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ೬೩ ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ.ನೊಂದಣಿ ಮಾಡಲು ಲಂಚ ಹಾಗೂ ಕಮಿಷನ್ ಪಡೆದು ಜನರಿಗೆ ತೊಂದರೆ ನೀಡುತಿದ್ದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ದೂರು ಹೋಗಿದ್ದವು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿ ಇಂದು ಏಕಾ ಏಕಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಕಚೇರಿಯಲ್ಲಿ ನೊಂದಣಿಗೆ ಬಳಸಿದ ೨೭ ಸಾವಿರ ಹೊರತುಪಡಿಸಿ 35 ಸಾವಿರ ನಗದು ಇಟ್ಟುಕೊಂಡಿದ್ದರು.
ನೊಂದಣಿಗೆ ಪಡೆದ ಹಣವಲ್ಲದೇ ೩೫ ಸಾವಿರ ಹೆಚ್ಚುವರಿ ಹಣ ದೊರೆತಿದ್ದು ಇದೀಗ ಬೆಳಕಿಗೆ ಬಂದಿದೆ.
ಹಾವೇರಿ ಮೂಲದ ಕುಮಟಾದ ಉಪನೊಂದಣಾಧಿಕಾರಿಯಾಗಿ ಶಿವಾನಂದ ಪಾಟೀಲ್ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಕಾರವಾರದ ಎಸಿಬಿ ಡಿವೈ ಎಸ್ ಪಿ ಗಿರೀಶ್ ನೇತ್ರತ್ವದಲ್ಲಿ ದಾಳಿ ನಡೆದಿದೆ.