ಅಂಕೋಲಾ : “ಸಾಹಿತ್ಯ ಕೃತಿಗಳ ಓದು ಬದುಕನ್ನು ಪ್ರೇರೆಪಿಸುತ್ತದೆ ಬದುಕಿನ ಆತ್ಮವಿಶ್ವಾಸವನ್ನು ಹಿಗ್ಗಿಸುವ ಜೊತೆಗೆ ಅಗಾಧ ಜ್ಞಾನ ಬದಗಿಸುವ ಶಕ್ತಿ ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳು ದಿನದ ಕೆಲಸಮಯ ಉತ್ತಮ ಕೃತಿಗಳನ್ನು ಓದಬೇಕು” ಎಂದು ಪಿ.ಎಂ.ಕಾಲೇಜಿನ ಉಪನ್ಯಾಸಕರಾದ ಉಲ್ಲಾಸ ಹುದ್ದಾರ ತಿಳಿಸಿದರು.

ಶೇಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ನಡೆದ ಕ.ಸಾ.ಪ ವಿಠ್ಠಲ ಗಾಂವಕರ ನೇತೃತ್ವದಲ್ಲಿ ನಡೆಯುತ್ತಿರುವ “ಬದುಕಿಗಾಗಿ ಸಾಹಿತ್ಯ” ಎಂಬ 6ನೇ ಉಪನ್ಯಾಸ ಮಾಲೆಯುಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

RELATED ARTICLES  ಹೊಟ್ಟೆಯಲ್ಲಿ ಬೆಂಕಿ ಇದ್ದರೆ ಮಾತ್ರ ಸಾಧನೆ ಸಾಧ್ಯ: ಮುರಳೀಧರ ಪ್ರಭು

2017ನೇ ಸಾಲಿನ ತಾಲೂಕಾ ಕ.ಸಾ.ಪ ಸಮ್ಮೇಳನದ ಸರ್ವಾಧ್ಯಕ್ಷರಾದ ವಿಠ್ಠಲ ಗಾಂವಕರ ಪ್ರಾಸ್ತಾವಿಕ ಮಾತನಾಡಿ ‘ಬದುಕಿಗಾಗಿ ಸಾಹಿತ್ಯ’ ಉಪನ್ಯಾಸದ ಅಗತ್ಯತೆ ಬಗ್ಗೆ ಆಶಯ ನುಡಿಗಳನ್ನಾಡಿದರು. ಶಾಲಾ ಮುಖ್ಯಾಧ್ಯಾಪಕರಾದ ಎನ್.ವಿ.ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರಾಜು ಶೇಡಗೇರಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಾ ಕ.ಸಾ.ಪ ಪದಾಧಿಕಾರಿಗಳಾದ ನಿವೃತ್ತ ಶಿಕ್ಷಕ ವಾಸುದೇವ ನಾಯಕ ಕೊನೆಯಲ್ಲಿ ಸರ್ವರ ಉಪಕಾರ ಸ್ಮರಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು/ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದರು. ಶಾಲಾ ವಿದ್ಯಾರ್ಥಿಗಳು ಆರಂಭದಲ್ಲಿ ಸ್ವಾಗತಗೀತೆ ಹಾಡಿದರು.

RELATED ARTICLES  ಇಂದೂ ಮುಂದುವರಿಯುತ್ತಾ ಕೊರೋನಾ ಆರ್ಭಟ..? ಉತ್ತರ ಕನ್ನಡದಲ್ಲಿ 45 ಕ್ಕೂ ಹೆಚ್ಚು ಪಾಸಿಟೀವ್..? ಬುಲೆಟಿನ್ ಗಾಗಿ ಕಾದಿರುವ ಜನರು..!