ಹಿರೇಗುತ್ತಿ ಹೈಸ್ಕೂಲ್‍ನಲ್ಲಿ ಸೈಕಲ್ ವಿತರಣೆ
ಕುಮಟಾ: “ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸರ್ಕಾರ ಉಚಿತ ಬೈಸಿಕಲ್ ನೀಡುವ ಪ್ರಮುಖ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೊನ್ನಪ್ಪ ಎನ್ ನಾಯಕ ಹೇಳಿದರು.”

ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್‍ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸೈಕಲ್‍ನ್ನು ವಿತರಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕರು “ಮಕ್ಕಳ ಹಾಜರಾತಿ ಹೆಚ್ಚಿಸಲು ಘನ ಸರ್ಕಾರ ಉಚಿತ ಬೈಸಿಕಲ್ ನೀಡುವ ಉತ್ತಮ ಯೋಜನೆ ಜಾರಿಗೆ ತಂದಿದೆ”ಎಂದರು.

RELATED ARTICLES  ಶಾಲಾಭಿವೃದ್ಧಿಗೆ ಶ್ರಮಿಸಿದ ಮೂವರು ಎಂಜಿನೀಯರುಗಳನ್ನು ಸನ್ಮಾನಿಸುವ ಮೂಲಕ ವಿವೇಕನಗರದಲ್ಲಿ ಎಂಜಿನೀಯರ್ ದಿನಾಚರಣೆ 

ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ರವರು “ಮಗುವಿನ ಪ್ರಗತಿಯೇ ದೇಶದ ಪ್ರಗತಿ ಎಂದು ನಂಬಿರುವ ಸರ್ಕಾರ ವಿದ್ಯಾರ್ಥಿಗಳಿಗಾಗಿ ಹತ್ತು-ಹಲವಾರು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ” ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಹಾತ್ಮ ಗಾಂಧೀ ವಿದ್ಯಾವರ್ಧಕ ಕಾರ್ಯದರ್ಶಿ ಮೋಹನ.ಬಿ.ಕೆರೆಮನೆ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್, ಎನ್.ರಾಮು.ಹಿರೇಗುತ್ತಿ,ನಾಗರಾಜ ನಾಯಕ, ಮಹಾದೇವ ಗೌಡ, ಜಾನಕಿ ಗೊಂಡ, ಶಿಲ್ಪಾ ನಾಯಕ, ಇಂದಿರಾ ನಾಯಕ, ಸೌಜನ್ಯ ಬಂಟ್, ಕವಿತಾ ಅಂಬಿಗ ಹಾಗೂ ಎಂಟನೇ ವರ್ಗದ ಎಲ್ಲಾ ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.

RELATED ARTICLES  ಸಭಾ ಭವನದ ಸನಿಹವೇ ಪಲ್ಟಿಯಾಯ್ತು ಮದುವೆ ಟೆಂಪೋ..!

ವಿದ್ಯಾರ್ಥಿ ಪ್ರತಿನಿಧಿ ವೆಂಕಟೇಶ ಕಾರ್ಯಕ್ರಮ ನಿರೂಪಿಸಿದರು, ವಿನಯಾ ಗೌಡ ಸ್ವಾಗತಿಸಿದಳು, ಸಹನಾ ಗೌಡ ವಂದಿಸಿದಳು.
ವರದಿ:ಎನ್.ರಾಮು.ಹಿರೇಗುತ್ತಿ