ಕುಮಟಾ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸರ ಎಗರಿಸಿದ ಕಳ್ಳರನ್ನು ಬಂಧಿಸುವಲ್ಲಿ ಪೋಲೀಸರು ಇಂದು ಯಶಸ್ವಿಯಾಗಿದ್ದಾರೆ.
ದಿನಾಂಕ 08-11-2018 ರಂದು ಕುಮಟಾದ ಕಡ್ಲೆ ಓಣಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ಬೇಬಿ ನಾಗಪ್ಪ ಗಾವಡಿ ಎಂಬ ಹೆಸರಿನ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 17 ಗ್ರಾಮ ತೂಕದ ಬಂಗಾರ ಚೈನನ್ನು ಮೋಟಾರು ಸೈಕಲ್ ಮೆಲೆ ಬಂದು ಅಪರಿಚಿತ ವ್ಯಕ್ತಿಯು ಹರಿದುಕೊಂಡು ಹೋದ ಬಗ್ಗೆ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಡ ಮಹಿಳಯ ಸರವನ್ನು ಹರಿದುಕೊಂಡು ಹೋಗಿದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಪತ್ತೆ ಹಚ್ವುವ ನಿಟ್ಟಿನಲ್ಲಿ ಮಾನ್ಯ ಹೆಚ್ಚುವರಿ ಎಸ್ ಪಿ ಕಾರವಾರ ,ಮಾನ್ಯ ಡಿ ಎಸ್ ಪಿ ಭಟ್ಕಳ ರವರ ಮಾರ್ಗದರ್ಶನದಲ್ಲಿ ಸಂತೋಷ ಶೆಟ್ಟಿ ಸಿಪಿ ಐ ಕುಮಟಾ ಅವರು ತಮ್ಮ ನೇತ್ರತ್ವದಲ್ಲಿ ಪಿಎಸ್ ಐ ಸಂಪತ್ ಕುಮಾರ,ಪಿ ಎಸ್ ಐ ಸುದಾ ಟಿ ಅಘನಾಶಿನಿ ಹಾಗೂ ಅಪರಾದ ವಿಭಾಗದ ಸಿಬ್ಬಂದಿಗಳಾದ ಅಧಮ್ ಶೇಕ್ ಗಣೇಶ ನಾಯ್ಕ,ಸಂತೋಷ ಬಾಳೇರ ಕೃಷ್ಣ ಎನ್ ಜಿ ಹಾಗೂ ನಾಗರಾಜ ನಾಯ್ಕ ರವರನ್ನು ಒಳಗೊಂಡ ತಂಡವನ್ನು ರಚಿಸಿ ಆರೋಪಿಯ ತೀವ್ರ ಶೋಧ ನಡೆಸಿದ್ದರು.
ಸಾರ್ವಜನಿಕರು ನೀಡಿದ ಮಾಹಿತಿಯ ಆದಾರದ ಮೇಲೆ ಹೊನ್ನಾವರದ ಗುನಗನಕೇರಿ ನಿವಾಸಿಯಾದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ರಾಘವೇಂದ್ರ ತಿಮ್ಮು ಗೌಡ ಬಂಧಿಸಿ ಆತನಿಂದ ಸುಮಾರು 17 ಗ್ರಾಂ ನಷ್ಟು 50000 ದಷ್ಟು ಬೆಲೆಬಾಳುವ ಚಿನ್ನದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಪೋಲೀಸರ ಈ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗಿದೆ.