ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಕುಮಟಾ ತಾಲ್ಲೂಕು ಸಾಂತಗಲ್, ಬಂಗಣೆ, ಮೊರ್ಸೆ,ನಿಲ್ಕುಂದ ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಪರಿಶೀಲಿಸಿದರು .

ಶಾಸಕರು ಮೊರ್ಸೆಯಲ್ಲಿ ಸುಮಾರು ಎರಡು ಕಿಲೋಮೀಟರ್ ರಸ್ತೆಯನ್ನು ಸಾರ್ವಜನಿಕರೊಂದಿಗೆ ಕಾಲ್ನಡಿಗೆಯಿಂದಲೇ ಕ್ರಮಿಸಿದರು. ಈ ರಸ್ತೆಯು ಸಾಂತಗಲ್ ಮತ್ತು ಶಿರಸಿಯನ್ನು ಸಂಪರ್ಕಿಸುವ ರಸ್ತೆಯಾಗಿದ್ದು ಇಲ್ಲಿಂದ ಶಿರಸಿಗೆ ಕ್ರಮಿಸುವ ದೂರ ಸುಮಾರು ಐವತ್ತರಿಂದ ಅರವತ್ತು ಕಿಲೋಮೀಟರ್ ಕಡಿಮೆ ಆಗಲಿದೆ .

IMG 20181118 WA0006
ಇದು ಬಹಳ ವರ್ಷದ ಹಿಂದೆ ನಿರ್ಮಿಸಲ್ಪಟ್ಟ ರಸ್ತೆಯಾಗಿದ್ದು ಕಳೆದ ಐದರಿಂದ ಆರು ವರ್ಷದಿಂದ ನಿರ್ವಹಣೆ ಇಲ್ಲದೆ ಕುರುಚಲ ಗಿಡ ಬೆಳೆದಿದ್ದು ಸಾರ್ವಜನಿಕರು ಸುಮಾರು ರಸ್ತೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛ ಮಾಡಿದ್ದಾರೆ. ಇನ್ನು ಕೇವಲ ಮೂರ್ನಾಲ್ಕು ಕಿಲೋಮೀಟರ್ ಸ್ವಚ್ಛಗೊಳಿಸಿ ಒಂದೇ ಒಂದು ಸಿ.ಡಿ ನಿರ್ಮಾಣಮಾಡಿದರೆ ರಸ್ತೆಯಲ್ಲಿ ವಾಹನ ಸಂಚಾರ ಮಾಡಬಹುದಾಗಿದೆ .

RELATED ARTICLES  ಸಂಕ್ರಾಂತಿಯಂದು ಸಹಸ್ರಲಿಂಗಕ್ಕೆ ಪ್ರವೇಶ ನಿರ್ಬಂಧ.

ಈ ರಸ್ತೆಯ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿ ತೊರುತ್ತಿರುವುದು ಶ್ಲಾಘನೀಯ ಎಂದು ಶಾಸಕರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು ಮತ್ತು ಸಾರ್ವಜನಿಕರು ಮತ್ತು ಅಧಿಕಾರಿಗಳ ಸಹಕಾರದಿಂದ ಈ ರಸ್ತೆಯನ್ನು ಸಂಚಾರಯೋಗ್ಯ ರಸ್ತೆಯನ್ನಾಗಿ ಮಾಡಲಾಗುವುದು ಎನ್ನುವ ಭರವಸೆಯನ್ನು ಶಾಸಕರು ನೀಡಿದರು ಎನ್ನಲಾಗಿದೆ.

RELATED ARTICLES  ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಗಜಾನನ ಪೈ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ವಿನಾಯಕ ಭಟ್, ಶ್ರೀ ಮಹಾದೇವ ನಾಯ್ಕ , ಶ್ರೀ ಕೇಶವ ನಾಯ್ಕ್ ,ಹಾಗೂ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ
ಎಂಜಿನಿಯರ್ ರಾಜು ಶಾನಭಾಗ ಮತ್ತು 250ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡಿದ್ದರು . ಶಿರಸಿ ನೀಲ್ಕುಂದ ಭಾಗದ ಸಾರ್ವಜನಿಕರು ಕೂಡ ರಸ್ತೆಯ ಬಗ್ಗೆ ಆಸಕ್ತಿಯಿಂದ ಬಂದಿರುವುದು ವಿಶೇಷವಾಗಿತ್ತು .