ಕುಮಟಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ “ಮಾಯಾವಿ” ಕಿರು ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ . ರಾಘವೇಂದ್ರ ಲಕ್ಷ್ಮೇಶ್ವರ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಮಾಯಾವಿ” ಕಿರುಚಿತ್ರ ತನ್ನದೇ ಆದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ .
ಕುಮಟಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ಕಿರು ಚಿತ್ರಗಳು ಸದ್ದು ಮಾಡುತ್ತಿದ್ದು “ಮಾಯಾವಿ” ಅದೆಲ್ಲವನ್ನೂ ಮೀರಿ ತನ್ನದೇ ಆದ ವಿಶೇಷತೆಗಳಿಂದ ಜನತೆಯ ಮುಂದೆ ಕಾಣಿಸಿಕೊಳ್ಳಲಿದೆ ಎನ್ನುವುದು ತಂಡದ ಆಶಯ .
ಮಾಯಾವಿ ಅತ್ಯುತ್ತಮ ಕಥಾ ಹಂದರವನ್ನು ಒಳಗೊಂಡಿರುವ ಕಿರುಚಿತ್ರವಾಗಿದ್ದು ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂದು ಈ ತಂಡ ಅಭಿಪ್ರಾಯಪಟ್ಟಿದೆ .
ಮಾಯಾವಿ ಕಿರು ಚಿತ್ರದ ಪೋಸ್ಟರ್ ಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು ಕಿರುಚಿತ್ರದ ಬರುವಿಕೆಗಾಗಿ ಜನತೆ ಕುತೂಹಲದಿಂದ ಕಾಯುವಂತಾಗಿದೆ .ಕಿರುಚಿತ್ರದ ಟ್ರೈಲರ್ ಬಿಡುಗಡೆಗೆ ಸಕಲ ರೀತಿಯಲ್ಲಿಯೂ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.ಇದರ ಜೊತೆ ಜೊತೆಗೆ ವೈವಿಧ್ಯತೆ ಹಾಗೂ ವಿನೂತನ ಪ್ರಯೋಗದೊಂದಿಗೆ ಜನತೆಯ ಮನ ಗೆಲ್ಲಲು ಸಕಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ .
ನಮ್ಮ ಕುಮಟಾ ಹಾಗೂ ಸುತ್ತಮುತ್ತಲಿನ ಜನರ ಹೊಸ ಪ್ರಯತ್ನಕ್ಕೆ ನಾವೆಲ್ಲ ಬೆಂಬಲ ನೀಡಬೇಕಿದ್ದು ಮಾಯಾವಿ ಚಿತ್ರತಂಡಕ್ಕೆ
ಜೈ ಎನ್ನಬೇಕಿದೆ.