ಶಿರಸಿ:ಈತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ಜರುಗಿದ ಪ್ರೌಢಶಾಲಾ ವಿಭಾಗದ ಪ್ರೌಢಶಾಲಾ ವಿಭಾಗದ 17ವರ್ಷ ಒಳಗಿನ ಯೋಗ ಸ್ಪರ್ಧೆಯಲ್ಲಿ ತಾಲೂಕಿನ ಸಾಲ್ಕಣಿ ಶ್ರೀ ಲಕ್ಷ್ಮೀನೃಸಿಂಹ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ ಹೆಗಡೆ ಜೋಗನಮನೆ ಪ್ರಥಮ ಸ್ಥಾನ ಪಡೆದು ಔರಂಗಾಬಾದ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಜೊತೆಯಲ್ಲಿ ದಾವಣಗೆರೆಯ ಸಪ್ತಶ್ರೀ ಯೋಗ ಕೇಂದ್ರದ ಆಯೋಜನೆಯಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಈಚೆಗೆ ಭಾಗವಿಸಿದ್ದ ಅಭಿಷೇಕ ಅಲ್ಲಿಯೂ ಪ್ರಥಮ ಸ್ಥಾನ ಪಡೆದು
ಥೈಲೆಂಡ್‍ನಲ್ಲಿ ಜರುಗಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಯಲ್ಲಿ ರಾಜ್ಯದ ಪ್ರತಿಭೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ.
ರಾಜ್ಯದ ಸುಮಾರು 100ಕ್ಕೂ ಹೆಚ್ಚು ಯೋಗ ಪಟುಗಳಿಗಿಂತ ಯೋಗಾಸನ, ಯೋಗದ ಭಂಗಿ, ಸಮತೋಲನ ಕಾಪಾಡುವಿಕೆ ಸೇರಿದಂತೆ ನಿರ್ಣಾಯಕರ ಹತ್ತಕ್ಕೂ ಹೆಚ್ಚು ನಿಯಮಗಳಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಕಳೆದೆರಡು ವರ್ಷಗಳಿಂದ ರಾಜ್ಯಾದ್ಯಂತ ಯೋಗ ಸ್ಪರ್ಧೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಬಂಗಾರ ಪದಕಗಳನ್ನು ಬಾಚಿಕೊಂಡ ಅಭಿಷೇಕ ಹೆಗಡೆ ಅಪ್ಪಟ ಗ್ರಾಮೀಣ ಪ್ರತಿಭೆ.
ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಪುತ್ರನ ಸಾಧನೆಯ ಕುರಿತು ತಂದೆ ಬಾಲು ಹೆಗಡೆ ಹಾಗೂ ತಾಯಿ ಮಂಗಲಾ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ