ಭಟ್ಕಳ: ಜುಲೈ ತಿಂಗಳಲ್ಲಿ ದುಬೈನಿಂದ ಹೊರಟಿದ್ದ ಭಟ್ಕಳದ 9 ಮೀನುಗಾರರು ಸೇರಿ ಒಟ್ಟು18 ಜನರು ಅಚಾನಕ್ಕಾಗಿ ಇರಾನ್ ಗಡಿ ತಲುಪಿದ್ದರು. ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆದು ಅನೇಕ ತಿಂಗಳುಗಳು ಕಳೆದರೂ ಭಾರತ ಸರ್ಕಾರದಿಂದ ಯಾವುದೇ ಸಹಕಾರ ಲಭ್ಯವಾಗಿಲ್ಲ.
ಇರಾನ್ನಲ್ಲಿ ಬಂಧಿತರಾಗಿರುವ ಕರ್ನಾಟಕ ಮೀನುಗಾರರಿಗೆ ಈವರೆಗೆ ಬಿಡುಡಗೆ ಭಾಗ್ಯ ಸಿಕ್ಕಿಲ್ಲ. ಈ ವಿಚಾರದಲ್ಲಿ ಮೀನುಗಾರರಿಗೆ ಸಹಾಯ ಮಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕ ನಿವೇದಿತ ಆಳ್ವ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.
ಜುಲೈ ತಿಂಗಳಲ್ಲಿ ದುಬೈನಿಂದ ಹೊರಟಿದ್ದ ಭಟ್ಕಳದ 9 ಮೀನುಗಾರರು ಸೇರಿ ಒಟ್ಟು18 ಮಂದಿ ಅಚಾನಕ್ಕಾಗಿ ಇರಾನ್ ಗಡಿ ತಲುಪಿದ್ದರು. ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆದು ಅನೇಕ ತಿಂಗಳುಗಳು ಕಳೆದರೂ ಭಾರತ ಸರ್ಕಾರದಿಂದ ಯಾವುದೇ ಸಹಕಾರ ಲಭ್ಯವಾಗಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ನಿವೇದಿತ ಆಳ್ವ, ‘ಸುಷ್ಮಾ ಸ್ವರಾಜ್ ಅವರೇ ಕರ್ನಾಟಕದ 18 ಮೀನುಗಾರರು ಇರಾನ್ ವಶದಲ್ಲಿದ್ದಾರೆ. ಅವರನ್ನು ವಾಪಾಸ್ಸು ಕರೆ ತರಲು ಸಹಾಯ ಮಾಡಿ. ನೀವು ಅಲ್ಲಿನ ಅಧಿಕಾರಗಳ ಜತೆ ಮಾತನಾಡಿದರೆ ಈ ಸಮಸ್ಯೆ ಬಗೆಹರಿಯಲಿದೆ’ ಎಂದಿದ್ದಾರೆ.
ನಿವೇದಿತ ಆಳ್ವ ಮಾಡಿರುವ ಟ್ವೀಟ್ಅನ್ನು ರೀಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ‘ಬೋಟ್ನಲ್ಲಿದ್ದ ಕರ್ನಾಟಕ ಮೀನುಗಾರರನ್ನು ಬಂಧಿಸಿ ತಿಂಗಳುಗಳೇ ಕಳೆದಿವೆ. ತೆಹ್ರಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜತೆ ಮಾತನಾಡಿ ಅಗತ್ಯ ಸಹಾಯ ಮಾಡಿ ಮತ್ತು ಅವರನ್ನು ವಾಪಸ್ಸು ಕರೆ ತನ್ನಿ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಕೋರಿದ್ದಾರೆ. ಇವರ ಮನವಿಗೆ ಸುಷ್ಮಾ ಸ್ವರಾಜ್ ಅವರು ಪ್ರತಿಕ್ರಿಯಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.