ಕ್ಯಾಲಿಪೋರ್ನಿಯಾ: ಹೆಚ್ಚಿನ ಬಳಕೆದಾರರು ಸಂವಹನಕ್ಕಾಗಿ ಮೆಸೆಂಜರ್ ಬಳಸುತ್ತಿರುವಂತೆ ಈಗ ಫೇಸ್ಬುಕ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ ಶೀಘ್ರದಲ್ಲಿಯೇ ದೊರೆಯಲಿದೆ.
ಈ ಫೀಚರ್ ನಲ್ಲಿ ಗುಂಪು ಚಾಟ್ ಜೊತೆಗೆ ಒಟ್ಟಿಗೆ ವಿಡಿಯೋ ನೋಡುವ ಅವಕಾಶ ದೊರೆಯಲಿದೆ ಎಂದು ಸಿನೆಟ್ ವರದಿ ಮಾಡಿದೆ.
ಗುಂಪಿನಲ್ಲಿ ಚಾಟ್ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳನ್ನು ನೋಡಬಹುದಾಗಿದೆ. ಅಲ್ಲದೇ ಯಾರು ನೋಡುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಈ ಹೊಸ ವೈಶಿಷ್ಟ್ಯವನ್ನು ಬಳಕೆದಾರರಾದ ಅನನ್ಯ ಅರೊರಾ ಕಂಡುಹಿಡಿದಿದ್ದು, ಕೋಡಿನ ಸ್ಕ್ರೀನ್ ಹಾಟ್ಸ್ ಪೋಸ್ಟ್ ಮಾಡಿದ್ದಾರೆ.
ಮೆಸೆಂಜರ್ ನಲ್ಲಿ ಯಾವಾಗಲೂ ಹೊಸ ಹೊಸ ಪ್ರಯತ್ನ ಮಾಡಲಾಗುತ್ತಿರುತ್ತದೆ. ಈ ವೈಶಿಷ್ಠ್ಯ ಕೆಲವರಿಗೆ ಹೋಗಬಹುದು, ಮತ್ತೆ ಕೆಲವರಿಗೆ ಹೋಗದೆ ಇರಬಹುದು ಎಂದು ಫೇಸ್ಬುಕ್ ಹೇಳಿದೆ.