ತಿನ್ನಲು ಏನಿಲ್ಲ ಎಂದಾಗ ನಾವು ಪ್ಲಾಸ್ಟಿಕ್ ತಿನ್ನುಲು ಅಸಾಧ್ಯ ತಾನೇ!!!????? ಆದರೆ ನಾವು ಎಸೆದ ಪ್ಲಾಸ್ಟಿಕ್ ಎಲ್ಲವೂ ನೇರವಾಗಿ ಗೋ ಮಾತೆಯ ಹೊಟ್ಟೆ ಸೇರುತ್ತಿದೆ….. “ನಾವು ಕೇವಲ ಜೀವಿಗಳು…” ಆದರೆ “ಗೋ ಮಾತೆ ಪರಮ ಜೀವಿ”… ನಾವೇ ನೇರ ಹೊಣೆ… ಪ್ಲಾಸ್ಟಿಕ್ ಬಿಡೋಣ…. ಬಳಸಿದರೂ ಅದು ಗೋ ಮಾತೆಯ ಒಡಲು ಸೇರಲು ಬಿಡದಿರೋಣ…. # ಪ್ಲಾಸ್ಟಿಕ್ ಬಿಡಿ….. ಗೋ ಮಾತೆಯ ಉಳಿಸಿ…ಎಂಬ ಆದೊಂಲನದಲ್ಲಿ ಶ್ರೀ ರಾಮ ಚಂದ್ರಾಪುರ ಮಠ ಭಾರತೀಯ ಗೋಪರಿವಾರ ಮುಳ್ಳೇರಿಯಾ ಮಂಡಲ ಗುಂಪೆ ವಲಯ‌ ಅಮೃತಪಥ ಕಾರ್ಯಕ್ರಮ
ತಾ.18-11-2018 ಆದಿತ್ಯವಾರ ಗೋವು ಮೇಯುವ ಪರಿಸರ ಪ್ಲಾಸ್ಟಿಕ್ ಮುಕ್ತವಾಗಿಸುವ ಅಮೃತಪಥ ಕಾರ್ಯಕ್ರಮ ಗುಂಪೆ ಶಂಕರ ಧ್ಯಾನ ಮಂದಿರ ಪರಿಸರದಲ್ಲಿ ನಡೆಯಿತು. ವಲಯ ಅಧ್ಯಕ್ಷರಾದ ಶ್ರೀಯುತ ಅಮ್ಮಂಕಲ್ಲು ರಾಮ ಭಟ್ಟರು ಗೋಧ್ವಜಾರೋಹಣ ಮಾಡಿದರು.

RELATED ARTICLES  11 ದಿನ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾನುವಾರ ವೈಭವದ ತೆರೆ.

ಉಪಾಧ್ಯಕ್ಷರಾದ ಶ್ರೀಯುತ ಕಕ್ವೆ ಶಂಕರ ಭಟ್ಟರು ಪ್ಲಾಸ್ಟಿಕ್ ಕಸ ಹೆಕ್ಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಕೇಶವ ಪ್ರಸಾದ್ ಎಡಕ್ಕಾನ, ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಬೆಜಪ್ಪೆ, ಮಾತೃಪ್ರಧಾನೆ ಕಾವೇರಿ ಅಮ್ಮ ಕಾರ್ಯಕರ್ತರಾದ ಉಮೇಶ ಗುಂಪೆ, ಶ್ರೀರಾಮ ಶರ್ಮ ಎಡಕ್ಕಾನ, ಜಯಲಕ್ಷ್ಮಿ ಬೆಜಪ್ಪೆ ಮೊದಲಾದವರು ಶುಚೀಕರಣ ಕೆಲಸದಲ್ಲಿ ಸಹಕರಿಸಿದರು. ರಾಮತಾರಕ ಜಪ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

RELATED ARTICLES  ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ