ಯಲ್ಲಾಪುರ: ಬಹಳ ವರ್ಷದಿಂದ ಪ್ರೀತಿಸುತ್ತಿದ್ದ ಬೇರೆ ಧರ್ಮದ ಯುವಕ ಹಾಗೂ ಯುವತಿಯ ಸೋಮವಾರ ದೇವಸ್ಥಾನದಲ್ಲಿ ಮದುವೆಯಾಗುವುದರ ಮೂಲಕ ಯಶಸ್ವಿ ಪ್ರೇಮ ಕತೆ ನಾಂದಿ ಬರೆದಿದದಾರೆ.
ಯಲ್ಲಾಪುರ ತಾಲೂಕಿನ ಕಿರವತ್ತಿಯ ಬಸವರಾಜ ಶೀಲವಂತರ ಹಾಗೂ ಶಾಹಿದಾ ಯುವ ಜೋಡಿಗಳು ಕಳೆದ ಮೂರು ನಾಲ್ಕು ವರ್ಷದಿಂದ ಒಬ್ಬನೊಬ್ಬರು ಪ್ರೀತಿಸಿಸುತ್ತಿದ್ದರು. ಇಲ್ಲಿ ಯುವಕ ಅನುಕೂಲಸ್ತ ಯುವತಿ ಮನೆಯಲ್ಲಿ ಬಡತನ, ಆದರೆ ಇವರ ಪ್ರೀತಿಗೆ ಅಡ್ಡವಾಗಿದ್ದು, ಅಂತಸ್ತುಗಳಲ್ಲ ಧರ್ಮ, ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದು, ಮದುವೆಗೆ ಎರಡು ಕಡೆಗಳಲ್ಲಿ ಒಪ್ಪಿಗೆ ಸಿಗುವುದು ಸಂಶಯವಿತ್ತು. ಏನೆ ಆದರೂ ಎದುರಿಸುವ ದೈರ್ಯ ಮಾಡಿದ ಯುವ ಜೋಡಿ ಒಂದು ತಿಂಗಳ ಹಿಂದೆ ಧಾರವಾಡದ ವಿವಾಹ ನೋಂದಣಿ ಕಛೇರಿಯಲ್ಲಿ ತಮ್ಮ ವಿಶೇಷ ವಿವಾಹವನ್ನು ನೋಂದಣಿ ಮಾಡಿಕೊಂಡು, ಮೇ. 22 ಸೋಮವಾರ ಯಲ್ಲಾಪುರ ತಾಲೂಕಿನ ಚಂದಗುಳಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಹಿತೈಷಿಗಳು ಹಾಗೂ ವರನ ಸಂಬಂಧಿಕರ ಮಧ್ಯೆ ಸಪ್ತ ಪದಿ ತುಳಿದು. ಸತಿ ಪತಿಗಳಾದರು.
ಶಾಹೀದಾ(ಈಗ ಸಹನಾ) ಧಾರವಾಡದಲ್ಲಿದ್ದು ಬಿಬಿಎ ಓದುತ್ತಿದ್ದಾಳೆ, ಬಸವರಾಜ ಕಿರವತ್ತಿಯಲ್ಲಿ ತಮ್ಮದೆ ಆದ ಕಿರಾಣಿ ಅಂಗಡಿ ನಡೆಸುತ್ತಿದ್ದಾನೆ. ಮದುವೆ ಸಮಾರಂಭದಲ್ಲಿ `ನಮ್ಮ ಯುಕೆ’ ಪ್ರತಿನಿಧಿಯೊಂದಿಗೆ ಮಾತನಾಡಿದ ಯುವ ಜೋಡಿ ನಮಗೆ ಧರ್ಮಕ್ಕಿಂತ ದೊಡ್ಡದು ಪ್ರೀತಿ, ಮನುಷ್ಯರೆಲ್ಲರು ಒಂದೆ ಜಾತಿ ಧರ್ಮದವರು, ನಮ್ಮ ಕುಟುಂಬದವರು ಒಪ್ಪಿಗೆ ಇಲ್ಲವಾದರೂ ಮುಂದೆ ಅವರ ಮನಸ್ಸು ಪರಿವರ್ತನೆಯಾಗಲಿದೆ ಎಂಬ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬಸವರಾಜ ತಂದೆ ಸುಬಾಸ ಶೀಲವಂತರ್, ವದುವನ್ನು ಧಾರೆ ಎರದುಕೊಟ್ಟ ವಿನೋದ ದೇಸಾಯಿ ಹಾಗೂ ಪ್ರೀತಿಕಾ ದೇಸಾಯಿ ದಂಪತಿಗಳು, ಕಿರವತ್ತಿಯ ದಲಿತ ಮುಖಂಡ ಬಾಬು ಸಿದ್ದಿ, ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ ಮಂಗೇಶ ಕೈಸರೆ, ಕಿರವತ್ತಿ ಚಲವಾದಿ ಸಮಾಜದ ಪ್ರಮುಖ ಪರಶುರಾಮ ಚಲವಾದಿ, ಕಿರವತ್ತಿ ವಿಎಚ್‍ಪಿ ಮುಖಂಡ ಸುರೇಶ ಜಾದವ್, ಪ್ರಮುಖರಾದ ಪ್ರಭು ಚಿಂಚಕಂಡಿ, ಮಂಜುನಾಥ, ಸುಭಾಶ ಶೇಷಗಿರಿ, ಸುಭಾಸ, ಮೀನಾಕುಮಾರಿ, ಮೋಕಾಶಿ ಅರವಿಂದ ಮುಂತಾದವರು ಮುಂಚೂಣಿಯಲ್ಲಿದ್ದರು.