ಕುಮಟಾ: ಕುಮಟಾ ವೈಭವದ ಆಮಂತ್ರಣ ಪತ್ರಿಕೆ ಯನ್ನು ವೈಭವ ಸಮಿತಿಯವರು ರವಿವಾರ ಬಿಡುಗಡೆಗೊಳಿಸಿದರು.

ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ತಾಂಡವ ಕಲಾನಿಕೇತನದ ಮಂಜುನಾಥ ನಾಯ್ಕ, ಸರ್ವಾಧ್ಯಕ್ಷ ಎಮ್ ಜಿ ಭಟ್ಟ, ಕೃಷ್ಣಾನಂದ ಭಟ್ಟ, ನರಸಿಂಹ ಭಟ್ಟ ಹಾಗೂ ಇತರರು ಬಿಡುಗಡೆ ಗೊಳಿಸಿದರು.

ಕುಮಟಾ ವೈಭವದ ರೂವಾರಿ ತಾಂಡವ ಕಲಾನಿಕೇತನ ದ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ಈ ಬಾರಿ ಕಳೆದ ವರ್ಷಕ್ಕಿಂತ ಉತ್ತಮ ಕಾರ್ಯಕ್ರಮಗಳನ್ನು ಕುಮಟಾ ಜನತೆಗೆ ನೀಡಲು ಮುಂದಾಗಿದ್ದೇವೆ. ಕಲರ್ಸ ಕನ್ನಡ ದ ಧಾರಾವಾಹಿ ಯ ಬಹುತೇಕ ತಂಡ, ದೂರದರ್ಶನ ಚಂದನ ತಂಡ, ಅನೇಕ ಪ್ರಸಿದ್ಧ ಹಾಡುಗಾರರು, ನೃತ್ಯ ತಂಡಗಳು ಆಗಮಿಸಿದ್ದು ಅದ್ಭುತ ಕಾರ್ಯಕ್ರಮ ಕ್ಕೆ ನಮ್ಮ ಜಿಲ್ಲೆಯ ಜನರು ಸಾಕ್ಷಿ ಆಗಲಿದ್ದಾರೆ ಎಂದರು. ಹಾಗೂ 5 ದಿನದ ಎಲ್ಲಾ ಕಾರ್ಯಕ್ರಮಕ್ಕೂ ಸರ್ವರೂ ಆಗಮಿಸಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಜನತೆಯಲ್ಲಿ ವಿನಂತಿಸಿದರು..
ನಂತರ ಮಾತನಾಡಿದ ಕಾರ್ಯಾಧ್ಯಕ್ಷ ಎಮ್ ಜಿ ಭಟ್ಟ ಇದೊಂದು ನಮ್ಮ ಜಿಲ್ಲೆಯಲ್ಲಿ ಅದ್ಭುತ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ. 21 ರಿಂದ 25 ತನಕ ವಿವಿಧ ಮನರಂಜನಾ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆಯಲಿದೆ. ಪ್ರಸಿದ್ಧ ಹಾಡುಗಾರರಾದ ವಿಜಯ ಪ್ರಕಾಶ್, ಶಮಿತಾ ಮಲ್ನಾಡ್ ತಂಡ ಪ್ರಸಿದ್ಧ ನೃತ್ಯ ಗಾರರ ತಂಡ ಸ್ಥಳೀಯ ಪ್ರತಿಭೆಗಳ ತಂಡ ಹೀಗೆ ಸಾಕಷ್ಟು ಕಾರ್ಯಕ್ರಮಗಳು ತಮ್ಮನ್ನೆಲ್ಲ ರಂಜಿಸಲಿವೆ. ಜೊತೆಗೆ ಚಲನಚಿತ್ರೊತ್ಸವ ಕೂಡ ಚೆನ್ನಮ್ಮ ಗಾರ್ಡನ್ ಸಮಿಪದ ಪುರಭವನ ದಲ್ಲಿ ಬೆಳಿಗ್ಗೆ 10 ರಿಂ ಸಂಜೆ 5 ರ ತನಕ ಆಯ್ದ ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರಕ್ಕೆ ಒಳಗಾದ ಚಲನಚಿತ್ರ ಪ್ರದರ್ಶನ ನಡೆಯಲಿದೆ..ಜೊತೆಗೆ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗಾಗಿ ಕುಮಟಾದಲ್ಲಿ ಒಟ್ಟಾರೆ ಐದು ದಿನ ಮನರಂಜನಾ ಜಾತ್ರೆಯ ಸಡಗರ ಇರಲಿದೆ ಎಂದರು ಹಾಗೂ ಸರ್ವರನ್ನೂ ಆಮಂತ್ರಿಸುತ್ತೇನೆ ಎಂದರು.

RELATED ARTICLES  ಆತ್ಮಹತ್ಯೆಗೆ ಶರಣಾದ ವ್ಯಕ್ತಿ : ಕುಟುಂಬದ ಆಕೃಂದನ.

ಆಮಂತ್ರಣ ಬಿಡುಗಡೆ ಗೊಳಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ, ಕೆ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಹಾಗೂ ವೈಭವ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ ಐದು ದಿನಗಳ ವೇದಿಕೆ ಕಾರ್ಯಕ್ರಮ ಹಾಗೂ ಮನರಂಜನಾ ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿದರು. ಮೊದಲ ದಿನ ಕಾರ್ಯಕ್ರಮ ವನ್ನು ಜಿಲ್ಲೆಯ ಉಸ್ತುವಾರಿ ಸಚೀವ ಹಾಗೂ ಕಂದಾಯ ಮಂತ್ರಿಗಳಾದ ಆರ್ ವಿ ದೇಶಪಾಂಡೆ ಯವರು ಉದ್ಘಾಟಿಸಲಿದ್ದಾರೆ. ಮಳಿಗೆಗಳನ್ನು ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ ಯವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯ ದಿನ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚೀವರಾದ ಡಾ ಜಿ ಪರಮೇಶ್ವರವರು ಆಗಮಿಸಲಿದ್ದಾರೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ ಎಂದರು. ಉಳಿದ ದಿನಗಳಲ್ಲಿಯೂ ಕೂಡ ಕೇಂದ್ರ ಸಚೀವ ಅನಂತಕುಮಾರ್ ಹೆಗಡೆ, ಎಚ್ ಕೆ ಪಾಟೀಲ, ಭಟ್ಕಳ ಶಾಸಕ ಸುನೀಲ ನಾಯ್ಕ ಕಾರವಾರ ಶಾಸಕಿ ರೂಪಾಲಿ ನಾಯ್ಕ, ಮಂಕಾಳ ವೈದ್ಯ ಹೀಗೆ ಗಣ್ಯಾತಿ ಗಣ್ಯರು ಆಗಮಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ನಮ್ಮ ಜೊತೆ ಕೈಜೊಡಿಸಲಿದ್ದಾರೆ ಎಂದರು.

RELATED ARTICLES  ಕೊರೋನಾ ತಡೆಗೆ ಕುಮಟಾ ಹೆಗಡೆಯ ಎರಡು ಸ್ಥಳಗಳು ಸೀಲ್ ಡೌನ್..!

ನಮ್ಮ ಪ್ರೀತಿಯ ಎಲ್ಲಾ ಜನತೆ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಶ್ರಮಕ್ಕೆ ನಿಮ್ಮ ಪ್ರೋತ್ಸಾಹದ ಆಶೀರ್ವಾದ ಮಾಡಿ ಶಾಂತತೆ ಯಿಂದ ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ತಾಂಡವ ಕಲಾನಿಕೇತನದ ಅಧ್ಯಕ್ಷರಾದ ಮಂಜುನಾಥ ನಾಯ್ಕ. ಕುಮಟಾ ವೈಭವ ಸಮೀತಿಯ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಸರ್ವಾಧ್ಯಕ್ಷರಾದ ಪ್ರೊ ಎಂ ಜಿ ಭಟ್ಟ ತಾಂಡವ ಕಲಾನಿಕೇತನದ ಜಿಲ್ಲಾ ಸಂಚಾಲಕರಾದ ನರಸಿಂಹ ಭಟ್ಟ ಕಡತೋಕಾ ಸಾಂಸ್ಕೃತಿಕ ಸಮೀತಿ ಅಧ್ಯಕ್ಷರಾದ ಕೃಷ್ಣಾನಂದ ಭಟ್ಟ ಸಂಚಾಲಕರಾದ ಅರುಣ ನಾಯ್ಕ. ಅಶ್ವಿನ್ ನಾಯ್ಕ ಮಹೇಶ ನಾಯ್ಕ ವನ್ನಳ್ಳಿ ರವಿ ಶೇಟ್ ಜಯಾ ಶೇಟ್ ಪ್ರಕಾಶ ನಾಯ್ಕ ಹೇಮಂತ ಕುಮಾರ ಗಾಂವಕರ ಮಂಜು ಜೈನ್ ಶಿವರಾಂ ಹರಿಕಂತ್ರ ಗಣೇಶ ನಾಯ್ಕ ಹೊದ್ಕೆ
ಉಪಸ್ಥಿತರಿದ್ದರು.