ಶಿರಸಿ: ಯಲ್ಲಾಪುರದಲ್ಲಿ ಡಿ.22 ಮತ್ತು 23ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಸಯ್ಯದ್ ಝಮೀರುಲ್ಲಾ ಷರೀಪ್ ಅವರು ಆಯ್ಕೆ ಆಗಿದ್ದಾರೆ.
ಭಾನುವಾರ ಇಲ್ಲಿಯ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಜಿಲ್ಲಾ ಕ.ಸಾ.ಪ. ಅದ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.
ಸಭೆಯಲ್ಲಿ ಜಿಲ್ಲಾ ಕ.ಸಾ.ಪ. ಕೋಶಾಧ್ಯಕ್ಷ ಡಾ. ಷರೀಫ್ ಅವರ ಹೆಸರನ್ನು ಸೂಚಿಸಿದರೆ ಹಳಿಯಾಳ ತಾಲೂಕು ಕ.ಸಾ.ಪ. ಅಧ್ಯಕ್ಷ ಉಪೇಂದ್ರ ಘೋರ್ಪಡೆ ಅವರು ಅನುಮೋದಿಸಿದರು.

ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಝಮೀರುಲ್ಲಾ ಷರೀಫ್, ಶಾಂತಿ ನಾಯಕ, ಶಾರದಾ ಭಟ್ಟ, ಗೋಪಾಲಕೃಷ್ಣ ಹಗಡೆ ಕೇರಿಮನೆ, ನಾಗೇಶ ಹೆಗಡೆ ಬಕ್ಕೆಮನೆ ಅವರ ಹೆಸರು ಚರ್ಚೆಯಾಯಿತು. ಅಂತಿಮವಾಗಿ ಹೆಚ್ಚಿನ ಸದಸ್ಯರು ಒಲವು ವ್ಯಕ್ತಪಡಿಸಿದ ಡಾ. ಝಮೀರುಲ್ಲಾ ಷರೀಫ್ ಅವರ ಹೆಸರನ್ನು ಉತ್ತರ ಕನ್ನಡ ಜಿಲ್ಲಾ 21ನೇ ಸಾಹಿತ್ಯಸಮ್ಮೇಳನಾಧ್ಯಕ್ಷರನ್ನಾಗಿ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಘೋಷಿಸಿದರು.
ಸಭೆಯಲ್ಲಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾರದಾ ಭಟ್ಟ ಕೂಜಳ್ಳಿ, ಅಮೃತ್ ರಾಮರಥ, ತಾಳೂಕು ಅಧ್ಯಕ್ಷರಾದ ಡಾ.ಶ್ರೀಧರ ಉಪ್ಪಿನಗಣಪತಿ ಕುಮಟಾ, ನಾಗರಾಜ ಮಾಳ್ಕೋಡ ಸಿದ್ದಾಪುರ, ವೇಣುಗೋಪಾಲ ಮದ್ಗುಣ ಯಲ್ಲಾಪುರ, ಪ್ರಕಾಶ ಭಾಗವತ ಶಿರಸಿ, ಡಾ. ಪ್ರಕಾಶ ನಾಯಕ ಯಲ್ಲಾಫುರ. ನಾಗರಾಜ ಹೆಗಡೆ ಯಲ್ಲಾಪುರ, ನಾಗರಾಹ ಹರಪನಹಳ್ಳಿ ಕಾರವಾರ ಉಪಸ್ಥಿತರಿದ್ದರು.

ಬಾಕ್ಸ್‍ನಲ್ಲಿ ಪ್ರಕಟಿಸಲು ಸಮ್ಮೇಳನಾಧ್ಯಕ್ಷರ ವಿವರ:
ಡಾ. ಸಯ್ಯದ್ ಝಮೀರುಲ್ಲಾ ಷರೀಫ್ ಅವರ ಪರಿಚಯ :
ಡಾ.ಸೈಯದ್ ಝಮೀರುಲ್ಲಾ ಷರೀಫ್
1951ರಲ್ಲಿ ಜನನ, ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯವರು. ತಂದೆ ಕನ್ನಡ ಶಾಲಾ ಶಿಕ್ಷಕರು.
ಕನ್ನಡದಲ್ಲಿ ಎಂ.ಎ ಪಿ ಎಚ್ ಡಿ ಪದವಿದರರು ಕನ್ನಡ ಉಪನ್ಯಾಸಕರಾಗಿ ಅಂಜುಮನ್ ಕಲಾ ವಿಜ್ಞಾನ ಮಹಾವಿದ್ಯಾಲಯ ಭಟ್ಕಳದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ 28 ವರ್ಷಗಳ ಕಾಲ ಸುದೀರ್ಘ ಸೇವೆ. ಅದೇ ಕಾಲೇಜಿನಲ್ಲಿ 4 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ 2011 ನವೆಂಬರ ನಲ್ಲಿ ನಿವೃತ್ತಿ.

RELATED ARTICLES  ಹವ್ಯಕ ಪಲ್ಲವ ಪ್ರಶಸ್ತಿಗೆ ಶಿರಸಿಯ ಬಾಲೆ ತುಳಸಿ ಹೆಗಡೆ ಆಯ್ಕೆ.

. ಭಟ್ಕಳದಲ್ಲಿ ಸಾಹಿತ್ಯದಿಂದ ಸೌಹಾರ್ದತೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಭಟ್ಕಳ ಮಲ್ಲಿಗೆಯಲ್ಲಿ ಸಾಹಿತ್ಯದ ಕಂಪು ಸೂಸುವಲ್ಲಿ ಮಹತ್ವಾ ಪಾತ್ರ ವಹಿಸಿದವರು. ಇವರ ಮಾರ್ಗದರ್ಶನದಲ್ಲಿ ನಾಲ್ಕು ಜನ ಪಿಎಚ್ ಡಿ ಪದವಿ ಮತ್ತು ನಾಲ್ಕು ಜನ ಎಂ.ಪಿ.ಎಲ್ ಪದವಿ ಪಡೆದಿರುತ್ತಾರೆ.

ಇವರ ಕೃತಿಗಳು : ಕಾವ್ಯ :
ಭರವಸೆಗಳು, ಮಾತಾಡಿದ ಮೌನ, ಷಾಮಿಯಾನ(ಪಿ.ಲಂಕೇಶ ಪ್ರಶಸ್ತಿ ಪಡೆದ ಕೃತಿ ), ಕಾಡಲ್ಲಿ ನಾಡಲ್ಲಿ, ನನ್ನ ಹಾಡಲ್ಲಿ ( ಕುವೆಂಪು ವಿ.ವಿ ಪದವಿ ಪಠ್ಯದಲ್ಲಿ ಕವನ ಸೇರ್ಪಡೆ )
ಗಜಲ್ ಹಾಗೂ ಇತರ ಕವನಗಳು
ಕಥೆ : ತಿರುವುಗಳು
ವಿಮರ್ಶೆ : ಪತ್ರಿಕಾ ಪ್ರತಿಬಿಂಬ,
ಸಾಪ್ತಾಹಿಕ ವಿಮರ್ಶೆ ( ಪ್ರಜಾವಾಣ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಪುಸ್ತಕ ವಿಮರ್ಶೆ)
ವ್ಯಕ್ತಿ ಪರಿಚಯ : ಮೌಲಾನ ಅಬ್ದುಲ್ ಕಲಾಂ ಆಜಾದ್
ಜನಾಂಗಿಕ ಅಧ್ಯಯನ : ಗೊಂಡರ ಸಂಸ್ಕøತಿ
ನವಾಯಿತರು,
ಸ್ಥಳ ದರ್ಶನ : ಭಟ್ಕಳ ಮತ್ತು ಕಾರವಾರ ತಾಲೂಕು ದರ್ಶನ
ವ್ಯಾಕರಣ : ಕನ್ನಡ ವ್ಯಾಕರಣ ಸೂಚಿ
ಪ್ರಬಂಧ : ಚಿಂತನ- ಮಂಥನ
ಸಂಪಾದನೆ : ಸೌಹಾರ್ದ ಸಂಗಮ(ಪ್ರಬಂಧಗಳು), ಪಯಣ ( ಕಥೆಗಳು ), ಕಂಪನ(ಕಥೆಗಳು), ಕಾವ್ಯಸಂಪದ (ಕರ್ನಾಟಕ ವಿ.ವಿ ಬಿ.ಎ. ಪ್ರಥಮ ವರ್ಷದ ಪಠ್ಯ ),

RELATED ARTICLES  ಮಕ್ಕಳು ಕ್ರೀಡಾಂಗಣಕ್ಕೆ ಮರಳಲಿ- ರವೀಂದ್ರ ಭಟ್ಟ ಸೂರಿ.

ಪ್ರಶಸ್ತಿಗಳು :
ಶಿಕ್ಷಣ ಕ್ಷೇತ್ರದ ಸೇವೆಗೆ ಚಾಲುಕ್ಯ ಪ್ರಶಸ್ತಿ- 2013 ರಲ್ಲಿ, ಜಾನಪದ ಕ್ಷೇತ್ರದ ಸೇವೆಗೆ – ಜೀಶಂಪ ಜಾನಪದ ತಜ್ಞ ಪ್ರಶಸ್ತಿ,-2010 ರಲ್ಲಿ, ಸಾಹಿತ್ಯ ಸೇವೆಗೆ ಸಾಧನಾ ಶ್ರೀ ಪ್ರಶಸ್ತಿ-2010 ರಲ್ಲಿಷಾಮಿಯಾನ ಕವನ ಸಂಕಲನಕ್ಕೆ ಪಿ.ಲಂಕೇಶ ಪ್ರಶಸ್ತಿ, 2008 ರಲ್ಲಿ,

ಅಭಿಮಾನಿಗಳ ಗೌರವ :
ಭಾವಾಭಿನಂದನೆ ಅಭಿನಂದನಾ ಕೃತಿ ಅರ್ಪಣೆ,
ಡಾ.ಸೈಯದ್ ಝಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನ(ರಿ) ಭಟ್ಕಳ ಮೂಲಕ ಪ್ರತಿವರ್ಷ ಭಾವೈಕ್ಯತೆಯ ಆಶಯ ಕೃತಿಗೆ ರೂ 5000 ಬಹುಮಾನ ಮತ್ತು ಪ್ರಶಸ್ತಿ ಫಲಕ ಮತ್ತು ಪತ್ರ ನಿರಂತರ ಪ್ರಶಸ್ತಿ ಪ್ರದಾನ
ಸಮೂಹ ಸಂವಹನ ಸಾಹಿತ್ಯ(ಕರ್ನಾಟಕ ವಿ.ವಿ ಬಿ.ಎ ಅಂತಿಮ ವರ್ಷದ ಕನ್ನಡ ಐಚ್ಚಿಕ ಪಠ್ಯ )
ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಜವಾಬ್ದಾರಿ ನಿರ್ವಹಿಸಿದ ಷರೀಫ್ ಅವರು
ಪಂಪ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ದಾನಚಿಂತಾಮಣ ಅತ್ತಿಮಬ್ಬೆ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗಳಲ್ಲಿ ಅರ್ಹರನ್ನು ಗುರುತಿಸುವಲ್ಲಿ ಪ್ರಾಮಾಣ ಕ ನಿರ್ವಹಣೆ ಮಾಡಿದ್ದಾರೆ.
2015-18 ರ ಅವಧಿಒಗೆ ಕರ್ನಾಟಕ ಜಾನಪದ ವಿ.ವಿ ಸಿಂಡಿಕೇಟ್ ಸದಸ್ಯ
2017 ರಿಂದ : ರಾಷ್ಟರೀಯ ಸಂತಕವಿ ಕನಕದಾಸ ಅಧ್ಯಯನಹಾಗೂ ಸಂಶೋಧನಾ ಕೇಂದ್ರ ಬೆಂಗಳೂರುಇದರ ಕಾರ್ಯಾನುಷ್ಠಾನ ಸದಸ್ಯ.
ಆಕಾಶವಾಣ ಬೆಂಗಳೂರು, ಧಾರವಾಡ, ಕಾರವಾರ ಮತ್ತು ಚಂದನ ವಾಹಿನಿಯಲ್ಲಿ ಸರಣ ರೂಪದಲ್ಲಿ ಬೆಳಗು ಕಾರ್ಯಕ್ರಮ ನೀಡಿದ ಹೆಗ್ಗಳಿಕೆ
ಕರ್ನಾಟಕ ಜಾನಪದ ವಿ.ವಿದ ಗ್ರಾಮ ಚರಿತ್ರೆ ಕೋಶ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಚರಿತ್ರಾ ಕೋಶದ ಜಿಲ್ಲಾ ಸಂಪಾದಕ.