ಕುಮಟಾ: ತಾಲೂಕಿನ ಹೊಲನಗದ್ದೆ ಶಾಲೆಯಲ್ಲಿ ದಿ//ಮಹಾದೇವ ಮಾಸ್ತರ ಮದ್ಗುಣಿಯವರ ಜನ್ಮಶತಮಾನೋತ್ಸವದ ಸವಿನೆನಪಿನಲ್ಲಿ ” ಶಾಲೆಗಳಿಗೆ ಪುಸ್ತಕ ಕೊಡುಗೆ “ಕಾರ್ಯಕ್ರಮ ನಡೆಯಿತು. ತಾಲೂಕಿನ ಆಯ್ದ 25 ಶಾಲೆಗಳಿಗೆ ತಲಾ 20 ಉಪಯುಕ್ತ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವರಾಮ ಭಟ್ಟರವರು “ಇದೊಂದು ಉತ್ತಮ ಕಾರ್ಯ. ತಮ್ಮ ತಂದೆಯವರ ನೆನಪಿನಲ್ಲಿ ಶಾಲೆಗಳಿಗೆ ಉಪಯುಕ್ತ ಪುಸ್ತಕಗಳನ್ನು ನೀಡಿದ ಜಿ.ಎಮ್.ಭಟ್ಟರವರು ಇತರರಿಗೆ ಮಾದರಿಯಾಗಿದ್ದಾರೆ” ಎಂದರು.

RELATED ARTICLES  ಕಂಟೇನರ್ ಹಾಗೂ ಕಲ್ಲು ಲಾರಿ ಮತ್ತು ಪ್ಯಾಸಂಜರ್ ಟ್ಯಾಂಪೋ ನಡುವೆ ಮಂಕಿ ಬಳಿ ಭೀಕರ ಅಪಘಾತ!

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿ ವಿದ್ಯಾಲಯ ಮೂರೂರಿನ ಮುಖ್ಯಾಧ್ಯಾಪಕರಾದ ಎಮ್.ಜಿ.ಭಟ್ಟರವರು ” ವ್ಯಕ್ತಿ ಸಮಾಜಮುಖಿಯಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ಸಾಮಾಜಿಕ ಚಿಂತನೆ ಮಾಡುವಂತಾದರೆ ಸಮಾಜದಲ್ಲಿ ಅದ್ಭುತ ಬದಲಾವಣೆ ಸಾಧ್ಯ” ಎಂದರು. ಹೊಲನಗದ್ದೆ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದೀಪಾ ಹಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ “ಶಾಲೆಗಳಿಗೆ ಬೇರೆ ಕೊಡುಗೆಗಳಿಗಿಂತ ಪುಸ್ತಕ ಕೊಡುಗೆ ನೀಡುವುದು ಶ್ರೇಷ್ಠವಾದದ್ದು. ಎಲ್ಲಾ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನೇ ನೆನಪಿನ ಕಾಣಿಕೆಯಾಗಿ ನೀಡುವ ಪದ್ಧತಿ ಜಾರಿಗೆ ಬರಲಿ “ಎಂದರು.

RELATED ARTICLES  ಕುಮಟಾ ನೌಕರರ ಸಂಘದ ಅಧ್ಯಕ್ಷರಾಗಿ ಆರ್.ಡಿ.ನಾಯ್ಕ 

ಕಾರ್ಯಕ್ರಮದಲ್ಲಿ ಎಸ್.ಎಮ್.ಭಟ್ಟ. ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದ ಗಣಪತಿ.ಡಿ.ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಜಿ.ಎಮ್.ಭಟ್ಟ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ಸಂಘಟಕರಾದ ರವೀಂದ್ರ ಭಟ್ಟ ಸೂರಿ ನಿರೂಪಿಸಿ,ವಂದಿಸಿದರು. 25 ಶಾಲೆಗಳ ಮುಖ್ಯಾಧ್ಯಾಪಕರು ಹಾಜರಿದ್ದರು.