ಚಳಿಗಾಲದಲ್ಲಿ ನಮ್ಮ ತುಟಿಗಳು ಒಡೆದುಕೊಳ್ಳುತ್ತನೇ.. ಇರುತ್ತದೆ. ಏನು ತಿನ್ನಲು ಹೋದರೆ ಮತ್ತೆ.. ಪದೇ ಪದೇ ಹುರಿ ಹುರಿ ಕಾಣಿಸಿಕೊಳ್ಳುತನೇ ಇರುತ್ತದೆ. ಅದಕ್ಕಾಗಿ ಅನೇಕ ಇಂಗ್ಲಿಷ್ ಮೆಡಿಶನ್ಸ್ ಕ್ರೀಂಗಳು ಅದು ಇದು ಅಂತ ತುಂಬಾನೇ ಹಾಕಿಕೊಳ್ಳುತ್ತನೇ ಇರುತ್ತೇವೆ ಯಾವುದರಿಂದಲೂ ಪ್ರಯೋಜನ ವಾಗುವುದೇ ಇಲ್ಲಾ ಎಂದು ಈ ಕೆಳಗೆ ಕೆಲವು ಆಯುರ್ವೇದಿಕ್ ಮತ್ತು ಅಡುಗೆ ಮನೆಯಲ್ಲೇ ಸಿಗುವಂತಹ ಸಾಮಾಗ್ರಿಗಳಿಂದ ತುಟಿ ಆರೈಕೆಗೆ ಪರಿಹಾರ ತಿಳಿಸಲಾಗಿದೆ.

1.ಅರಿಶಿಣವನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ತುಟಿಗೆ ಹಚ್ಚಿ ಒಂದೈದು ನಿಮಿಷ ಮೃದುವಾಗಿ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿದರೆ ನಮ್ಮ ತುಟಿಯು ಸಾಪ್ಟ್ ವಾಗುತ್ತದ್ದೆ ಅಷ್ಟೆ ಅಲ್ಲದೇ ಬಣ್ಣವು ತಿಳಿಯಾಗುತ್ತದೆ ಈ ಚಳಿಗಾಲದಲ್ಲಿ ಈ ರೀತಿ ಮಾಡುವುದು ಬೆಸ್ಟ್.

RELATED ARTICLES  ನಿಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ಯಾವ ಯಾವ ಆಹಾರ ಸೇವಿಸಬೇಕು ಗೊತ್ತಾ?

2.ಮನೆಯ ತೋಟದ ಗಿಡಗಳಲ್ಲಿ ಸಿಗುವ ಅಲೋವೆರವನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತುಟಿಗಳಿಗೆ ಲೇಪಿಸಿ ಕೆಲವು ಸೆಕೆಂಡ್ ಗಳ ಕಾಲ ಮೃದುವಾಗಿ ಮಸಾಜ್ ಮಾಡಿದರೆ ಚಳಿಗಾಲದಲ್ಲಿ ತುಟಿಯು ಬಿರುಕು ಬಿಡುವುದಿಲ್ಲ.

3.ನಿಂಬೆ ಹಣ್ಣಿನನ್ನು ಎರಡು ಭಾಗ ಮಾಡಿ ಕೊಂಚ ಪುಡಿ ಸಕ್ಕರೆಗಳ ಮೇಲೆ ಸವರಿ ನಿಧಾನವಾಗಿ ಮಸಾಜ್ ಮಾಡುತ್ತ ಬರಬೇಕು ಈ ನಿಂಬೆ ಹಣ್ಣಿನ ರಸವು ಉತ್ತಮ ಬ್ಲೀಚಿಂಗ್ ಏಜೆಂಟ್ ತರಹ ಕೆಲಸ ಮಾಡುತ್ತದೆ ಉದುರಿಸಿದ ಸಕ್ಕರೆಯು ಡೆಡ್ ಸ್ಕಿನ್ ಸೆಲ್ಸ್ ತೆಗೆಯುತ್ತದೆ ತುಟಿ ಆಕರ್ಷಕವಾಗಿ ಕಾಣುತ್ತದೆ.

RELATED ARTICLES  ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುವವರಿಗೆ ಇಲ್ಲಿದೆ ನೋಡಿ ಟಿಪ್ಸ..!

4.ಆಲಿವ್ ಆಯಿಲ್ ಜೊತೆ ಸಕ್ಕರೆ ಬೆರೆಸಿ ತುಟಿಗೆ ಹಚ್ಚಿ ಮೆಲ್ಲಗೆ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ತುಟಿ ಮೃದುವಾಗುತ್ತದೆ

5.ರೋಸ್ ವಾಟರ್ ಮತ್ತು ಜೇನನ್ನು ಜೊತೆಯಾಗಿ ಬೆರೆಸಿ ತುಟಿಗೆ ಹಚ್ಚಿ. 15 ನಿಮಿಷಗಳ ಬಳಿಕ ತೊಳೆಯಿರಿ. ಇದರಿಂದ ತುಟಿಯಲ್ಲಿ ಬಿರುಕು ಕಡಿಮೆಯಾಗುತ್ತದೆ