ಭಟ್ಕಳ: ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರಿಂದ ಇಂದು ಸೋಮವಾರ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲೆಯ ಹಿರಿಯ ಸಾಹಿತಿ ಷಾಮಿಯಾನದ ಕವಿ ಎಂದೆ ಹೆಸರಾದ ಡಾ. ಸೈಯದ್ ಝಮೀರುಲ್ಲಾ ಷರೀಪ್ ಅವರಿಗೆ ಅವರ ಮನೆಯಲ್ಲಿಯೇ ನಿನಾದದ ಸರ್ವ ಸದಸ್ಯರಿಂದ ಸನ್ಮಾನ ನೆರವೇರಿಸಲಾಯಿತು.
ಈ ಸಂದರ್ಬದಲ್ಲಿ ಸನ್ಮಾನ ಸ್ವೀಕರಿಸಿದ 21 ನೇ ಸಮ್ಮೇಳನಾಧ್ಯಕ್ಷರಾದ ಡಾ.ಸೈಯದ್ ಝಮೀರುಲ್ಲಾ ಷರೀಪರವರು ಮಾತನಾಡಿ ಇದು ನನ್ನ ಸಾಹಿತಿಕ ಜೀವನದ ಬಹುದೊಡ್ಡ ಅವಿಸ್ಮರಣೀಯ ಸಂದರ್ಭ ಇದು ನನಗೆ ಅತೀವ ಸಂತಸದ ಕ್ಷಣವೂ ಹೌದು ಎಂದರು. ನನ್ನ ವಿದ್ಯಾರ್ಥಿಗಳು ಸಾಹಿತ್ಯದ ಅಭಿಮಾನಿಗಳು ನನಗೆ ನಿಜವಾದ ಆಸ್ತಿ ಎಂಬುದು ಇಂತ ಸನ್ಮಾನ ಸಾಬೀತು ಪಡಿಸಿತು ಎಂಬುದಾಗಿ ಭಾವುಕರಾದರು.
ಈ ಸಂದರ್ಭದಲ್ಲಿ ನಿನಾದ ಪ್ರಧಾನ ಸಂಚಾಲಕಿ ಶ್ರೀಮತಿ ರೇಷ್ಮಾ ಉಮೇಶ, ಸಂಚಾಲಕ ಉಮೇಶ ಮುಂಡಳ್ಳಿ, ಸದಸ್ಯರಾದ ಮಹೇಶ ನಾಯ್ಕ ಬಸ್ತಿ, ಗೋಪಾಲ ನಾಯ್ಕ, ದಿನೇಶ ಕೋಣಾರ ,ನಿನಾದ ಉಮೇಶ ಮತ್ತು ಅಣ್ಣಪ್ಪ ಗೊಂಡ ಮೊದಲಾದವರು ಉಪಸ್ಥಿತರಿದ್ದರು.