ಶಿರಸಿ : ಸಂಘದೊಂದಿಗೆ ದೀರ್ಘಕಾಲದಿಂದ ಉತ್ತಮ ವ್ಯಾವಹಾರಿಕ ಸಂಬಂಧ ಹೊಂದಿರುವ ನಿಷ್ಠಾವಂತ ಹಿರಿಯ ಸದಸ್ಯರನ್ನು ಹೃದಯಸ್ಪರ್ಷಿ ವಾತಾವರಣದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸುವ ಮೂಲಕ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಘದ ಪ್ರಧಾನ ಕಛೇರಿಯ ವ್ಯಾಪಾರಿ ಅಂಗಳದಲ್ಲಿ ಇಂದು ಜರುಗಿದ ಸಮಾರಂಭದಲ್ಲಿ ಕ್ಯಾಂಪ್ಕೋ ಲಿ., ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಘದ ನಿಷ್ಠಾವಂತ ಹಿರಿಯ 51 ಜನ ಸದಸ್ಯರುಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶ್ರೀ. ಹೆಗಡೆ ಕಡವೆ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾದ ಸೀತಾರಾಮ ಮಂ. ಹೆಗಡೆ, ನೀರ್ನಳ್ಳಿ, ಗಣಪತಿ ಶೇ. ರಾಯ್ಸದ, ಕಲ್ಸಳ್ಳಿ, ಕೃಷ್ಣ ಮ. ಹೆಗಡೆ, ಅಬ್ರಿ ಹೀಪ್ನಳ್ಳಿ, ಶಶಾಂಕ ಶಾಂ. ಹೆಗಡೆ, ಶೀಗೇಹಳ್ಳಿ, ಅಣ್ಣಪ್ಪ ಗೋ.ಗೌಡ, ಹುಲಕುತ್ರಿ, ಸುಬ್ರಾಯ ವೆಂ. ಭಟ್ಟ, ಸಾಲ್ಕಣಿ, ನರಸಿಂಹ ತಿ. ಭಟ್ಟ, ಗುಂಟ್ಕಲ್, ರಾಮಕೃಷ್ಣ ತಿ. ಹೆಗಡೆ, ಅಳಗೋಡ, ಬಾಲಚಂದ್ರ ಪ್ರ. ಹೆಗಡೆ, ಕೊಡಮೂಡ, ನಾರಾಯಣ ಈ. ನಾಯ್ಕ, ಮೆಣಸಿ, ಶಾರದಾ ಅ. ಹೆಗಡೆ, ಶಿರಸಿಮಕ್ಕಿ, ಮಹಾಲಕ್ಷ್ಮೀ ದಿ. ಹೆಗಡೆ, ಲಿಂಗದಕೋಣ ಪ್ರಧಾನ ವ್ಯವಸ್ಥಾಪಕ ಶ್ರೀ ರವೀಶ ಹೆಗಡೆ, ಸಂಘದ ಹಿರಿಯ ಸದಸ್ಯರು ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ಲಾರಿಯಲ್ಲಿ ಅಕ್ರಮ ಸಾಗಾಟ : 5,250 ಲೀಟರ್ ಮದ್ಯಸಾರ ವಶ

ಇದೇ ವೇದಿಕೆಯಲ್ಲಿ ಸಂಘದ ಸುಪರ್ ಮಾರ್ಕೆಟ್‍ನಲ್ಲಿನ ರೂ.2,000 ಮೇಲ್ಪಟ್ಟು ಖರೀದಿಸಿದ ಖರೀದಿ ಬಿಲ್ಲ್‍ಗಳ ಮೇಲೆ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಲಕ್ಕಿ ಡ್ರಾ ಮೆಗಾ ಪ್ರೈಜ್ ಮೊದಲನೇ ಬಹುಮಾನವಾದ ರೆಪ್ರಿಜರೇಟರ್ ವಿಜೇತರಾದ ಶ್ರೀ ಸುಬ್ರಾಯ ನಾರಾಯಣ ಹಾವಳಿಮನೆ, ಎರಡನೇ ಬಹುಮಾನ ವಾಷಿಂಗ್ ಮಷಿನ್‍ನ ವಿಜೇತರುಗಳಾದ ಶ್ರೀಮತಿ ಸೀಮಂತಿನಿ ಶ್ರೀ. ಹೆಗಡೆ ಕಡವೆ, ಹಾಗೂ ಶ್ರೀಮತಿ ಯಮುನಾ ಬಿನ್ ಸುಬ್ರಾಯ ನಾಯ್ಕ ಮುಠ್ಠಳ್ಳಿ ಮತ್ತು ಮೂರನೇ ಬಹುಮಾನ ಸ್ಯಾಮಸಂಗ್ ಮೊಬೈಲ್‍ನ ವಿಜೇತರುಗಳಾದ ಶ್ರೀ ಸುರೇಶ ಬಸಪ್ಪ ಕುಂಕೂರು ಲಂಡಕನಹಳ್ಳಿ, ಶ್ರೀ ಮಂಜುನಾಥ ರಾಮಕೃಷ್ಣ ಹೆಗಡೆ ಬಾಳಗಾರ, ಹಾಗೂ ಸ್ಕೋಡವೇಸ್ ಶಿರಸಿ ಇವರುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

RELATED ARTICLES  ಬೈಕ್‌ನಿಂದ ಬಿದ್ದು ಅಸುನೀಗಿದ ಹೊನ್ನಾವರ ಎಎಸ್ಐ