ಶಿರಸಿ: ವಾರದ ಹಿಂದೆ ಶಿರಸಿಯ ಮಳಲಗಾಂವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕೆಲ ದುಷ್ಕರ್ಮಿಗಳು ಗ್ರಾಮದ ಯುವಕ ಅರುಣ ಮಡಿವಾಳನಿಗೆ ನಾಲ್ಕೈದು ಕಡೆ ಚಾಕು ಇರಿದಿದ್ದು ತಕ್ಷಣ ಗಂಭೀರ ಗಾಯಗೊಂಡಿದ್ದ ಅರುಣನನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕಾರ್ಯಕ್ರಮೊಂದರಲ್ಲಿ ಯುವಕರಿಂದ ಚಾಕು ಇರಿತಕ್ಕೊಳಗಾದ ಶಿರಸಿಯ ಯುವಕ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಶಿಕ್ಷಿಸುವಲ್ಲಿ ಪೊಲೀಸ್ ಇಲಾಖೆಯಿಂದ ತನಗೆ ಅನ್ಯಾಯವಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾನೆ.

RELATED ARTICLES  ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು; ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ವಕೀಲೆ ಅರ್ಚನ ವಿನಾಯಕ ಪಟಗಾರ ಅಭಿಮತ.

ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಅರುಣ ಮಡಿವಾಳ ಆಸ್ಪತ್ರೆಯಲ್ಲಿಯೇ ತಮಗಾದ ಅನ್ಯಾಯದ ಕುರಿತು ಮಾಹಿತಿ ನೀಡಿದರು.

ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡಿಲ್ಲ. ರಾಜಕೀಯ ಪ್ರೇರಿತವಾಗಿ ಹಲ್ಲೆ ನಡೆದಿದೆ. ಅದೇ ರೀತಿ ರಾಜಕೀಯ ಒತ್ತಡದ ಕಾರಣಕ್ಕೇ ಪ್ರಕರಣದ ತನಿಖೆ ಕೂಡ ಹಳ್ಳ ಹಿಡಿದಿದೆ ಎನ್ನುತ್ತಾರೆ ಸಂತ್ರಸ್ತ ಅರುಣ ಮಡಿವಾಳ.

RELATED ARTICLES  ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸರಸ್ವತಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅಮೋಘ ಸಾಧನೆ

ಘಟನೆಯ ಪ್ರತ್ಯಕ್ಷದರ್ಶಿಗಳು ಪೊಲೀಸರೆದುರು ಘಟನೆಯ ಕುರಿತು ಹೇಳಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಆರೋಪಿಗಳು ರಾಜಾರೋಷವಾಗಿ ಗ್ರಾಮದಲ್ಲಿಯೇ ತಿರುಗುತ್ತಿದ್ದು, ಇತರರು ಭಯ ಭೀತರಾಗಿದ್ದಾರೆ. ತಕ್ಷಣ ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.