ಹೊನ್ನಾವರ:ದಿನಾಂಕ 20/11/2018 ರಂದು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿ ಇಲ್ಲಿ ಶಾಸ್ತ್ರೀಯ ಸಂಗೀತ ತರಗತಿಯನ್ನು ಪ್ರಾರಂಭಿಸಲಾಯಿತು.ಈ ತರಗತಿಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಪಂಡಿತ ಶ್ರೀ ಶಿವಾನಂದ ಭಟ್ಟ ಹಡಿನಬಾಳ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶ್ರೀ ಭಾರತಿ ಎಜ್ಯುಕೇಶನ್ ಟ್ರಸ್ಟ್‌ ನ ಅಧ್ಯಕ್ಷ ರಾದ ಶ್ರೀ ಉಮೇಶ ಹೆಗಡೆಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಂಗೀತ ಅತೀ ಮಹತ್ವದ್ದಾಗಿದ್ದು, ಸಂಗೀತದಿಂದ ಮಾತ್ರ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದರು.ಸಂಗೀತದಿಂದ ಉತ್ತಮ ವಾತಾವರಣ ಉಂಟಾಗಿ ಒಳ್ಳೆಯ ಸಂಸ್ಕಾರಗಳು ಹುಟ್ಟಿಕೊಳ್ಳುತ್ತವೆ. ಅದಲ್ಲದೇ ಸಂಗೀತ ಆಲಿಸುವುದರಿಂದ ಉತ್ತಮ ಆರೋಗ್ಯವನ್ನು ಸಹ ಹೊಂದಬಹುದಾಗಿದೆ ಎಂದು ಅವರು ಹೇಳಿದರು.
ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸರವರು ಉಪಸ್ಥಿತರಿದ್ದರು

RELATED ARTICLES  ಉತ್ತರಕನ್ನಡದಲ್ಲಿ ಇಂದು ಕೊರೋನಾಕ್ಕೆ ಐವರು ಬಲಿ : 200 ಜನರಿಗೆ ಪಾಸಿಟಿವ್..!

IMG20181120152029
ವೇದಿಕೆಯ ಕಾರ್ಯಕ್ರಮದ ನಂತರ ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿತ್ತು. ಶ್ರೀ ಭಾರತಿಯ ವಿದ್ಯಾರ್ಥಿಯಾದ ಭಾಗ್ಯಲಕ್ಷ್ಮೀ ಭಟ್ಟ ಮತ್ತು ಪಂಡಿತ ಶ್ರೀ ಶಿವಾನಂದ ಭಟ್ಟ ರವರು ಕಚೇರಿ ನಡೆಸಿದರು.ತಬಲಾ ಸಾಥನ್ನು ಶ್ರೀ ಎನ್.ಜಿ .ಹೆಗಡೆ ನೀಡಿದರು.ಮತ್ತು ಹಾರ್ಮೋನಿಯಂ ಸಾಥನ್ನು ಹರಿಶ್ಚಂದ್ರ ರವರು ನೀಡಿದರು.

RELATED ARTICLES  ವಿಶ್ವದಾಖಲೆ ಬರೆದ ಕೈಗಾ ಪುಟಾಣಿಗಳು: ಲಿಂಬೋ ಸ್ಕೇಟಿಂಗ್ ನಲ್ಲಿ ಪುಟಾಣಿಗಳ ಸಾಧನೆ