ಕುಮಟಾ : ಬಿಜೆಪಿಯ ಕುಮಟ ಮಂಡಲದ ವಿಸ್ತಾರಕರ ಪ್ರಮುಖರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾಗಿರುವ‌‌ ಎಂ ಜಿ‌ ಭಟ್‌ ವಿಸ್ತಾರಕರ ಸಂಘಟನೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ.

ಇವರು ಮೂಲ‌ ಬಿಜೆಪಿಗರಾಗಿದ್ದು ಪಕ್ಷ‌ ಅಧಿಕಾರದಲ್ಲಿ‌ ಇರಲಿ ಇಲ್ಲದೀರಲ್ಲಿ ಸಂಘಟನೆಯಲ್ಲಿ ಯಾವತ್ತು ಹಿಂದೆ ಉಳಿದವರಲ್ಲ. ಇವರು ಪಕ್ಷ ಸಂಘಟನೆಯಲ್ಲಿ ಎತ್ತಿದ್ದ ಕೈ. ಆ ಕಾರಣಕ್ಕಾಗಿದೆ ಇವರಿಗೆ ಕುಮಟ ಮಂಡಲದ ಕಾರ್ಯ ವಿಸ್ತಾರಕರ ಪ್ರಮುಖರೆಂದು ನೇಮಕ ಮಾಡಲಾಗಿದೆ.

RELATED ARTICLES  ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರೋಟರ್ಯಾಕ್ಟ್ ಘಟಕದ ಸ್ಥಾಪನೆ

ಈ ಬಾರಿ ಕ್ಷೇತ್ರಕ್ಕೆ ಮಾಜಿ ಸಚಿವ ಕುಮಾರ ಬಂಗಾರಪ್ಪ, ಮಾಜಿ ಶಾಸಕ ಜೆ ಡಿ ನಾಯ್ಕ, ಬೇಲೂರು ಗೋಪಾಲ‌ ಕೃಷ್ಣ ಅವರು ಕುಮಟ ಭಾಗದಲ್ಲಿ ಬಂದಿರುವ ಸಂದರ್ಭದಲ್ಲಿ ಅವರೊಂದಿಗೆ ಯಾವ ಯಾವ ಕಾರ್ಯಕರ್ತರು ತೆರಳ‌ ಬೇಕು ಎನ್ನುವುದನ್ನು ಅರಿತು ಪ್ರತಿಯೊಂದು ವಾರ್ಡ್ ಗೆ ಹೋಗುವಂತೆ ಮಾರ್ಗ ದರ್ಶನ ಮಾಡಿದ್ದಾರೆ. ಎಂ ಜಿ ಭಟ್ ಹಿಂದೆ ಸಾಕಷ್ಟು ಯುವ ಪಡೆ ಇದೆ. ಕಟ್ಟಿಕೊಂಡು ಪಕ್ಷ‌ ಸಂಘಟನೆಯಲ್ಲಿ ಎಂ ಜಿ ಭಟ್ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಎಂ ಜಿ ಭಟ್ ಮುಂದಾಳತ್ವ ದಲ್ಲಿ ಕುಮಟ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಉತ್ತಮ ವಾಗಿ ಸಾಗುತ್ತಿದೆ. ಇದೆ ರೀತಿ ಮುಂದುವರೆದಲ್ಲಿ ಕುಮಟ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಪಡೆಯುವುದರಲ್ಲಿ ಎರಡು ಮಾತಿಲ್ಲ.

RELATED ARTICLES  ಭಟ್ಕಳದಲ್ಲಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಉದ್ಘಾಟನೆ: ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಉದ್ಘಾಟನೆ.