ಹೊನ್ನಾವರ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಗುರುದೇವ ಕಿಣಿ ಇವನು ದಿನಾಂಕ 22 ರಿಂದ 24 ರವರೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮಧುಗಿರಿ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ 14 ವರ್ಷದೊಳಗಿನ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.

RELATED ARTICLES  ಸಾಹಸ ಸಾಧನೆಯ ಮಾರ್ಗ: ರಾಘವೇಶ್ವರ ಶ್ರೀ

ಇವನಿಗೆ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ .ವಿ. ಹೆಗಡೆ ಮತ್ತು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಟಿ. ಜಿ ಹೆಗಡೆ ಅವರು, ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿಯರಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್ ರವರು ಸಹಶಿಕ್ಷಕರು ಹಾಗೂ ಎಲ್ಲ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

RELATED ARTICLES  ಅಕ್ರಮವಾಗಿ ಮರ ಕಡಿದು ತುಂಡುಗಳ ಸಾಗಾಟ : ಆರೋಪಿಗಳು ಅರೆಸ್ಟ್..!