ಕಮಟಾ: ತಾಂಡವ ಕಲಾನಿಕೇತನ ಬೆಂಗಳೂರು ಮತ್ತು ವೈಭವ ಸಮಿತಿಯು ಹಮ್ಮಿಕೊಂಡ ಕುಮಟಾ ವೈಭವದ ನಿಮಿತ್ತ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನ.23 ರಿಂದ 25ರವರೆಗೆ ಪಟ್ಟಣದ ಕಿತ್ತೂರು ಚೆನ್ನಮ್ಮ ಪಾರ್ಕ್ ಪಕ್ಕದ ಪುರಭವನದಲ್ಲಿ óತಾಲೂಕಿನಲ್ಲೇ ಮೊಟ್ಟಮೊದಲು ಚಲನಚಿತ್ರೋತ್ಸವವನ್ನು ಸಜ್ಜುಗೊಳಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ನ.23 ರಂದು ಮುಂಜಾನೆ 10 ಗಂಟೆಗೆ ಚಲನಚಿತ್ರೋತ್ಸವದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾಪ. ಮತ್ತು ಚಲನಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ವಹಿಸಲಿದ್ದಾರೆ. ಕುಮಟಾ ವೈಭವ ಸಮಿತಿಯ ಗೌರವಾಧ್ಯಕ್ಷ ನಾಗರಾಜ ನಾಯಕ ತೊರ್ಕೆ, ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಉಪಸ್ಥಿತರಿರುವರು, ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಪತ್ರಕರ್ತ ಎಂ.ಜಿ.ನಾಯಕ ಆಶಯನುಡಿಗಳನ್ನಾಡಲಿದ್ದಾರೆ. ಕುಮಟಾ ತಾಲೂಕು ಕ.ಸಾ.ಪ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗಂಗಾದೃ ಕೊಳಗಿ, ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಸಹ ಕಾರ್ಯದರ್ಶಿ ಪ್ರೊ.ನಾಗರಾಜ ಹೆಗಡೆ ನಿರ್ವಹಿಸಲಿದ್ದಾರೆ.
ಚಲನಚಿತ್ರೋತ್ಸವದಲ್ಲಿ ನ.23 ರಂದು ಮುಂಜಾನೆ 10.30ಕ್ಕೆ ಚಂಪಾ ಶೆಟ್ಟಿ ನಿರ್ದೇಶನದ ಅಮ್ಮಚ್ಚಿಯೆಂಬ ನೆನಪು’ ಮಧ್ಯಾಹ್ನ 3 ಗಂಟೆಗೆ ಸತ್ಯಪ್ರಸಾದ್ ನಿರ್ದೇಶನದ ‘ರಾಮಾ ರಾಮಾ ರೇ’, ನ.24 ರಂದು ಮುಂಜಾನೆ 10 ಗಂಟೆಗೆ ವಿಶಾಲ್‍ರಾಜ್ ನಿರ್ದೇಶನದ ‘ಜುಲೈ 22 1947’, ಮಧ್ಯಾಹ್ನ 3 ಗಂಟೆಗೆ ವಿಶಾಲ್‍ರಾಜ್ ನಿರ್ದೇಶನದ ‘ಸಾವಿತ್ರಿಬಾಯಿ ಫುಲೆ’, ನ.25ರಂದು ಮುಂಜಾನೆ 10 ಗಂಟೆಗೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಶಾಂತಿ’, ಮಧ್ಯಾಹ್ನ 3 ಗಂಟೆಗೆ ನಾಗರಾಜ್ ಅದ್ವಾನಿ ನಿರ್ದೇಶನದ ‘ಅಗಸಿ ಪಾರ್ಲರ್’ ಹೀಗೆ ಒಟ್ಟು 6 ಸಿನಿಮಾ ಪ್ರದರ್ಶನಗೊಳ್ಳಲಿದೆ.
ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಆಯಾ ಸಿನಿಮಾದ ನಿರ್ದೆಶಕರು, ಕಲಾವಿದರು ಉಪಸ್ಥಿತರಿರಲಿದ್ದಾರೆ. ಪ್ರೇಕ್ಷಕರು ಪ್ರತಿ ಸಿನಿಮಾ ಪ್ರದರ್ಶನದ ನಂತರ ಅವರೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅರವಿಂದ ಕರ್ಕಿಕೋಡಿ ವಿವರ ನೀಡಿದ್ದಾರೆ.
ನ.25 ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ವಿಮರ್ಶಕ ಡಾ. ಎಂ.ಜಿ.ಹೆಗಡೆ ಸಮಾರೋಪ ನುಡಿಯನ್ನಾಡಲಿದ್ದು ಅಧ್ಯಕ್ಷತೆಯನ್ನು ತಾಂಡವ ಕಲಾ ನಿಕೇತನದ ಅಧ್ಯಕ್ಞ ಮಂಜುನಾಥ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕ.ಸಾಪ. ಮತ್ತು ಚಲನಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಚಲನಚತ್ರೋತ್ಸವದ ಸಿನಿಮಾ ಅವಲೋಕನ ಮಾಡಲಿದ್ದಾರೆ. ಕುಮಟಾ ವೈಭವ ಸಮಿತಿಯ ಸರ್ವಾಧ್ಯಕ್ಷ ಎಂ.ಜಿ.ಭಟ್ಟ ಉಪಸ್ಥಿತರಿರಲಿದ್ದಾರೆ. ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕೃಷ್ಣಾನಂದ ಭಟ್ಟ, ತಾಲೂಕು ಕ.ಸಾ.ಪ ಕಾರ್ಯದರ್ಶಿಗಳಾದ ಚಿದಾನಂದ ಭಂಡಾರಿ, ಎಂ.ಎಂ.ನಾಯ್ಕ ನಿರ್ವಹಿಸಲಾದ್ದಾರೆ.
ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತರು ಪಾಸ್‍ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448438472 ಸಂಪರ್ಕಿಸಬಹುದಾಗಿದೆ ಎಂದು ಅರವಿಂದ ಕರ್ಕಿಕೋಡಿ ಹೇಳಿದ್ದಾರೆ.