ಹೊನ್ನಾವರ: ತಾಲೂಕಿನ ಮಾವಿನಕುರ್ವಾ ಆಮೃಪುರಾಧೀಶ ಶ್ರೀ ಗೋಪಾಲಕೃಷ್ಣ ದೇವರ ವನಭೋಜನ ಉತ್ಸವ ವೈಕುಂಠ ಚತುರ್ದಶಿಯ ನವೆಂಬರ್ 22 ಗುರುವಾರದಂದು ನಡೆಯಲಿದೆ.

ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಸ್ಥಳೀಯ ಸೇವೆ, ಪಲ್ಲಕ್ಕಿ ಉತ್ಸವ, ವನದಲ್ಲಿ ಧಾತ್ರಿ ಹವನ, ಪುಷ್ಪಾಲಂಕಾರ, ಪ್ರಸನ್ನ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.

RELATED ARTICLES  ಗಾಂಜಾ ಮಾರಾಟ ಹಾಗೂ ಸೇವನೆ ಆರೋಪ 15 ಯುವಕರು ಪೊಲೀಸ್ ವಶಕ್ಕೆ.

ರಾತ್ರಿ 9 ಗಂಟೆಗೆ ಶರಾವತಿ ನದಿಯಲ್ಲಿ ಶ್ರೀದೇವರನ್ನು ಕುಳ್ಳಿರಿಸಿ ಭವ್ಯ ದೀಪಾಲಂಕೃತ ತೆಪ್ಪೋತ್ಸವದಲ್ಲಿ ನೌಕಾವಿಹಾರೋತ್ಸವ ದೀಪಪ್ರಜ್ವಲನದೊಂದಿಗೆ ನಡೆಯಲಿದ್ದು, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹಾಗೂ ಪಟ್ಟ ಶಿಷ್ಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ರಾತ್ರಿ 10 ಗಂಟೆಗೆ ದೇವಿಯ ಚೌಕದಲ್ಲಿ ದರ್ಶನ ದ್ವಾರ ಸೂಚಿಸಿದಂತೆ ಶ್ರೀನವದುರ್ಗಾ ದೇವಿಗೆ ಸುವರ್ಣ ಮಂಟಪ ಸಮರ್ಪಣಾ ಕಾರ್ಯಕ್ರಮ ಉಭಯ ದೇವರ ಸಮಾಗಮದಲ್ಲಿ ಸಮರ್ಪಿಸಲಾಗುವುದು ಎಂದು ಸುವರ್ಣ ಮಂಟಪ ಸಮಿತಿ ಅಧ್ಯಕ್ಷ ನರಸಿಂಹ ವೆಂಕಟೇಶ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕಾರು ಮರಕ್ಕೆ ಡಿಕ್ಕಿ 2 ಸಾವು