ಕುಮಟಾ : ತಾಂಡವ ಕಲಾ ನಿಕೇತನ ಹಾಗೂ ಕುಮಟಾ ವೈಭವ ಸಮಿತಿಯವರು ನಡೆಸುತ್ತಿರುವ ಕುಮಟಾ ವೈಭವಕ್ಕೆ ಅದ್ದೂರಿ ಚಾಲನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವ್ಹಿ ದೇಶಪಾಂಡೆಯವರು ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಈ ಸಮಧರ್ಭದಲ್ಲಿ ಮಾತನಾಡಿದ ದೇಶಪಾಂಡೆ ಕುಮಟಾ ಸಾಂಸ್ಕೃತಿಕ ನಗರವಾಗುತ್ತಿರುವುದು ಸಂತಸ ತಂದಿದೆ. ಜನತೆ ಕಲೆಯ ಪ್ರಿಯರು ಇಂತಹ ಸ್ಥಳದಲ್ಲಿ ಕಾರ್ಯಕ್ರಮದ‌ ಸಂಘಟನೆ ಅತ್ಯಂತ ಯಶಸ್ವಿಯಾಗಿರುವುದು ಇಲ್ಲಿ ಕಾಣುತ್ತಿದೆ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಮಹನಿಯರಿಗೆ ನಗರದ ಶಕ್ತಿ ದೇವತೆ ಶ್ರೀ ಮಾಹಸತಿ ದೇವಸ್ಥಾನದ ಆವರಣದಿಂದ ಮಣಕಿ ಮೈದಾನದ ವರೆಗೆ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಲಾಯಿತು.

RELATED ARTICLES  ಕೋಟಿ ಕೋಟಿ ಹಣ ಹಾಕಿ ಮಾಡುತ್ತಿರುವ ಕಾಮಗಾರಿ ಅಸಮರ್ಪಕ : ಭಾಸ್ಕರ ಪಟಗಾರ ಆರೋಪ : ಸ್ಥಳಕ್ಕೆ ಭೇಟಿ.

FB IMG 1542817656618

ಶಾಸಕರಾದ ದಿನಕರ ಶೆಟ್ಟಿಯವರು ಮಳಿಗೆಗಳನ್ನು ಉದ್ಘಾಟಿಸಿದರು. ಜಿ.ಪಂ‌ ಅಧ್ಯಕ್ಷೆ ಜಯಶ್ರೀ ಮೊಗೇರ ವೇದಿಕೆಯ ಉದ್ಘಾಟನೆ ಮಾಡಿದರು. ಉದ್ಘಾಟನೆಗೂ ಮುನ್ನ ನಡೆದ ಯಕ್ಷ ನೃತ್ಯ ಎಲ್ಲರ ಮನ ಗೆದ್ದಿತು.

ವೇದಿಕೆಯಲ್ಲಿ ಸಾಧಕರಾದ ರಾಜೇಶ ಮಡಿವಾಳ, ಜಿ.ಡಿ ಭಟ್ಟ ಕೆಕ್ಕಾರು,ಪಿ.ಎಂ ನಾಯ್ಕ ಮಿರ್ಜಾನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಶಿವಾನಂದ ಭಟ್ಟ ಎಲ್ಲರನ್ನೂ ಮನದುಂಬಿ ಸ್ವಾಗತಿಸಿದರು. ತಾಂಡವ ಕಲಾನಿಕೇತನದ ಅಧ್ಯಕ್ಷರಾದ ಮಂಜುನಾಥ ನಾಯ್ಕ ಸಭೆಯಲ್ಲಿ ಸರ್ವರನ್ನೂ ಆದರಿಸಿ ಗೌರವಿಸಿದರು. ಸರ್ವಾಧ್ಯಕ್ಷರಾದ ಎಂ.ಜಿ ಭಟ್ಟ,ಗೌರವಾಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ವೇದಿಕೆಯಲ್ಲಿದ್ದರು.

RELATED ARTICLES  ಭಟ್ಕಳ :ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಅರ್ಜಿ ಆಹ್ವಾನ

ಕಾರ್ಯಕ್ರಮಕ್ಕೆ ಕುಮಟಾದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಮಾದರಿಯ ಹಾಗೂ ಅತ್ಯುತ್ತಮ ಗುಣಮಟ್ಟದ ಎಲ್.ಇ.ಡಿ ಪರದೆ ಅಳವಡಿಸಲಾಗಿದ್ದು ಇದು ಕಾರ್ಯಕ್ರಮದ ಶೋಭೆಯನ್ನು ಇಮ್ಮಡಿ ಗೊಳಿಸಿದೆ.

ಕಾರ್ಯಕ್ರಮದಲ್ಲಿ ಕುಮಟಾ ಶಾಸಕರಾದ ದಿನಕರ ಶೆಟ್ಟಿ , ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಜಯಶ್ರೀ ಮೊಗೇರ , ಭಟ್ಕಳದ ಮಾಜಿ ಶಾಸಕರಾದ ಮಂಕಾಳು ಎಸ್ ವೈದ್ಯ, ಕಾರವಾರದ ಮಾಜಿ ಶಾಸಕರಾದ ಸತೀಶ್ ಸೈಲ್, ಕಮಟಾ ತಾ.ಪಂ ಅಧ್ಯಕ್ಷ ರಾದ ಶ್ರೀಮತಿ ವಿಜಯಾ ಪಟಗಾರ , ಕಸಾಪ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.