ಭಟ್ಕಳ: ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಹಾಗೂ ಭಟ್ಕಳ ತಾಲೂಕಾಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತಿ ಶ್ರೀಧರ ಶೆಟ್ ಮಾತನಾಡಿಕನ್ನಡ ನಾಡಿನ ಏಕೀಕರಣವು ಕನ್ನಡಿಗರೆಲ್ಲ ಒಂದೇ ಸೂರಿನಡಿಯಲ್ಲಿ ಬರಲೇಬೇಕೆಂದು ನಡೆದ ಹೋರಾಟ, ಕನ್ನಡಿರ ಸ್ವಾಭಿಮಾನದ ಹೋರಾಟ ಎಂದರಲ್ಲದೇ ತಾಯಿ ನಾಡು, ತಾಯಿ ನಾಡಿನ ಕುರಿತು ನಮ್ಮಲ್ಲಿ ಹೆಮ್ಮೆ ಅಬಿಮಾನ ಸದಾ ಜಾಗೃತವಾಗಿರಬೇಕು ಎಂದು ನುಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಮಕ್ಕಳಲ್ಲಿ ನಾಡು ನುಡಿಯ ಕುರಿತು ಅಭಿಮಾನವನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಆ ಹಿನ್ನೆಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರನ್ನು ಹಾಗೂ ಆಯೋಜನೆಗೆ ಸಹಕರಿಸಿದ ವಿದ್ಯಾಂಜಲಿ ಶಿಕ್ಷಣ ಸಂಸ್ಥೆಗೆ ಅಭಿನಂದನೆ ಸಲ್ಲಿಸಿ ಕನ್ನಡದ ಗೀತೆಯೊಂದನ್ನು ಹಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಜ್ಯೋತಿಷ್ ಎಮ್. ಮಾತನಾಡಿ ರಾಜ್ಯೋತ್ಸವ ನಮ್ಮೆಲ್ಲರ ಅಭಿಮಾನದ ಹಬ್ಬ ನುಡಿದರಲ್ಲದೇ ರಾಜ್ಯೋತ್ಸವದ ಆಚರಣೆಗೆ ಪರಿಷತ್ತಿನ ಸಹಕಾರವನ್ನು ಶ್ಲಾಘಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶೈಕ್ಷಣಿಕ ಸಲಹೆಗಾರರರಾದ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ .ರಾಜ್ಯೋತ್ಸವದ ಅಂಗವಾಗಿ ನಡೆಸಲಾದರಸಪ್ರಶ್ನೆ, ಸಮೂಹ ಗೀತೆ ಹಾಗೂ ಭಾವಗೀತೆ ಸ್ಪರ್ದೆಯನ್ನು ನಡೆಸಿ ವಿಜೇತರಾದವರಿಗೆ ಪರಿಷತ್ತಿನ ವತಿಯಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಸಂಗಡಿಗರು ನಾಡಗೀತೆ ಹಾಡಿದರೆ ಶಿಕ್ಷಕಿ ಯಶೋಧಾ ನಾಯ್ಕಎಲ್ಲರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ವಿದ್ಯಾರ್ಥಿನಿ ಪ್ರಣಮ್ಯಾರಾಯ್ಕರ ನಾಡು ನುಡಿಯ ಕುರಿತು ಮಾತನಾಡಿದರು ಕುಮಾರಿ ಚೈತಾಲಿ ನಾಯ್ಕ ಕೊಳಲು ವಾದನವನ್ನು ಮಾಡಿದರಲ್ಲದೇ ಬಹುಮಾನ ವಿತರಣಾಕಾರ್ಯಕ್ರಮ ನಿರ್ವಹಿಸಿದರು. ಕು. ಪ್ರಣಮ್‍ಗೌಡಕಾರ್ಯಕ್ರಮನಿರೂಪಿಸಿದರು. ವಿನಿತ್ ನಾಯ್ಕ ವಂದಿಸಿದರು.ಇಡೀ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಘವೇಂಧ್ರಕಾಮತ್, ದಾಕ್ಷಾಯಿಣಿ ನಾಡರ್, ಪೂರ್ಣಿಮಾ ಮೊಗೇರ, ಶಲಿತಾ ಶೆಟ್ಟಿ, ರಚನಾ ನಾಯ್ಕ, ನಿಶಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.