ಯಲ್ಲಾಪುರ: ಲಾರಿ ಹಾಗು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ದುರ್ಮರಣವನ್ನಪ್ಪಿದ ಘಟನೆ
ಯಲ್ಲಾಪುರ ತಾಲೂಕಿನ ಸಮೀಪದಲ್ಲಿ ನಲ್ಲಿ ನಡೆದಿದೆ.

ಯಲ್ಲಾಪುರದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಫೋರ್ಡ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

RELATED ARTICLES  ಕುಮಟಾದ ಪೌರ ಕಾರ್ಮಿಕರಿಗೆ ದಿನಬಳಕೆ ಸಾಮಗ್ರಿಗಳ ಕಿಟ್ ವಿತರಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ.

ಬೆಂಗಳೂರು ಮೂಲದ ಕಾವ್ಯ ಪುರುಷೋತ್ತಮ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆ. ಪುರುಷೋತ್ತಮ, ಶಂಕರ ಬಾಲಕೃಷ್ಣ, ಹೇಮಲತಾ ಇವರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ತಾಲೂಕಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಕಲೆಹಾಕಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  `ಮಿಲೇನಿಯಂ ವೋಟರ್' ಅನ್ನು ಜ.25ರ ಮತದಾರರ ದಿನಾಚರಣೆಗೆ ಆಹ್ವಾನಿಸಿ:ಎಚ್.ಪ್ರಸನ್ನ