ಕುಮಟಾ: ಕಂದಾಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಆರ್ ವಿ ದೇಶಪಾಂಡೆ ಯವರು ಪ್ರವಾಸಿ ಮಂದಿರ ಕುಮಟಾದಲ್ಲಿ ಅಧಿಕಾರಗಳ ಸಭೆ ನಡೆಸಿ ಸಾರ್ವಜನಿಕ ಕುಂದು ಕೊರತೆಗಳನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉಳ್ಳೂರುಮಠಕ್ಕೆ ರಾತ್ರಿ ತಂಗುವ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ತಕ್ಷಣ ಸ್ಪಂದಿಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಆದೇಶಿಸಿದರು.
ಸಾರ್ವಜನಿಕರು ಕರ್ಕಿ ತೊಪ್ಪಲಕೇರಿ ಸಮುದ್ರ ತಡೆಗೋಡೆ,ಸಂತೆಗುಳಿ ರಸ್ತೆ ಹಾಗೂ ಕುಮಟಾ ಹಳೆ ಮೀನುಮಾರುಕಟ್ಟೆಯಲ್ಲಿರವ ಕುಟುಂಬಳಿಗೆ ವಾಸ್ತವ್ಯ ದ ವ್ಯವಸ್ಥೆ ಮಾಡುವಂತೆ ಮನವಿ ನೀಡಿದರು. ಇದಲ್ಲದೆ ಸಚೀವರು ಕುಮಟಾ ಒಳಚರಂಡಿ ಕಾಮಗಾರಿಯನ್ನು ಡಿಸೆಂಬರ್ 5ರ ಒಳಗೆ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ವಿ ಎಲ್ ನಾಯ್ಕ,ರವಿಕುಮಾರ್ ಶೆಟ್ಟಿ, ಹೊನ್ನಪ್ಪ ನಾಯಕ, ಗಾಯತ್ರಿ ಗೌಡ, ಮಂಜುನಾಥ ಗೌಡ, ಸುರೇಖಾ ವಾರೇಕರ ಹಾಗೂ ಮಧುಸೂದನ ಶೇಟ್ ಉಪಸ್ತಿತರಿದ್ಧರು.