ಮೈಸೂರು: ಜಿಲ್ಲೆಯ ದಟ್ಟಗಹಳ್ಳಿಯ ರೈತರೊಬ್ಬರ ಮನೆಯಲ್ಲಿ ಇಂದು ಜರ್ಸಿ ಹಸುವೊಂದು ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದೆ ಎಂದು ತಿಳಿದುಬಂದಿದೆ .
ದಟ್ಟಗಹಳ್ಳಿಯ ರೈತ ಚಂದ್ರು ಎಂಬುವವರ ಮನೆಯಲ್ಲಿ ಇಂದು ಬೆಳಗ್ಗೆ ಎರಡು ತಲೆ ಹೊಂದಿರುವ ಕರುವೊಂದು ಜನಿಸಿದೆ. ಚಂದ್ರು ಅವರು ಸಾಕಿದ್ದ ಜರ್ಸಿ ಹಸು ಗಂಡು ಕರುವಿಗೆ ಜನ್ಮ ನೀಡಿದ್ದು, ಅದು ಎರಡು ತಲೆ, ನಾಲ್ಕು ಕಣ್ಣು, ಎರಡು ನಾಲಿಗೆ ಇರುವ ವಿಚಿತ್ರ ಕರುವಿಗೆ ಜನ್ಮ ನೀಡಿದೆ ಎನ್ನಲಾಗಿದೆ. ಈ ವಿಚಿತ್ರ ಕರುವನ್ನು ಕಂಡ ಜನರು ಬೆರಗಾಗಿದ್ದಾರೆ.

RELATED ARTICLES  ಲೈಫ್ ಗಾರ್ಡ್ಗಳ ಜೊತೆ ಪ್ರವಾಸಿಗರ ಅನುಚಿತ ವರ್ತನೆ..!

ಈಗ ಸದ್ಯ ಹಸು ಮತ್ತು ಕರು ಆರೋಗ್ಯವಾಗಿದ್ದು, ಚೊಚ್ಚಲ ಕರು ವಿಶೇಷವಾಗಿ ಜನಿಸಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ ಎಂದು ವರದಿಯಾಗಿದೆ.

RELATED ARTICLES  ನಿಯಂತ್ರಣ ತಪ್ಪಿದ ಬೈಕ್ : ಅಪಘಾತದಲ್ಲಿ ಯುವಕ ಸಾವು