ತಂದೆಯನ್ನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡ ಇವರುಗಳಿಗೆ ಪ್ರೀತಿಯ ಅಮ್ಮನೇ ಜೀವಸೆಲೆ. ತಾಯಿಯೇ ಇವರ ಸರ್ವಸ್ವ. ಗಂಡನನ್ನು ಕಳೆದುಕೊಂಡ ಅಮ್ಮ ಚಿಕ್ಕಮಕ್ಕಳಿಗೆ ಪಾಠ ಹೇಳಿ ಕಷ್ಟಪಟ್ಟು ದುಡಿದು ತನ್ನಿಬ್ಬರು ಮಕ್ಕಳನ್ನು ಪೋಷಿಸಿದ್ದಾರೆ. ಉತ್ತಮೋತ್ತಮ ಸಂಸ್ಕಾರ ನೀಡಿ ಬದುಕು ಕಟ್ಟಿದರು. ಮನೆಯ ಪರಿಸ್ಥಿತಿ ಅರಿತಿದ್ದ ಇವರಿಬ್ಬರೂ ಒಳ್ಳೆಯ ವಿದ್ಯಾಭ್ಯಾಸ ಪಡೆದು ಅಣ್ಣ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಪಡೆದ, ತಂಗಿಯೂ ಇಂಜನಿಯರ್ ಆದಳು. ತಮಗಾಗಿ ಅಮ್ಮ ಕಷ್ಟಪಟ್ಟಿದ್ದನ್ನು ನೋಡಿದ್ದ ಈ ಅಣ್ಣ ತಂಗಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವುದೇ ತಮ್ಮ ಜೀವನದ ಗುರಿಯಾಗಿಸಿಕೊಂಡರು. ಅದರಂತೆ ಬದುಕುತ್ತಿದ್ದಾರೆ ಕೂಡ.

ಆದರೆ ವಿಧಿ ಏಕೋ ಅಮ್ಮನ ಮೇಲೆ ಪದೆಪದೇ ಪ್ರಹಾರ ಮಾಡುತ್ತಿದೆ. ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆ, ಮೂತ್ರನಾಳದಲ್ಲಿ ಸೋಂಕು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಅಮ್ಮ ಮತ್ತೆ ಆಸ್ಪತ್ರೆ ಸೇರಿದ್ದಾರೆ. ಐಸಿಯುನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದಲ್ಲಿ ಆಮ್ಲಜನಕ ಪ್ರಮಾಣವನ್ನು ಕಾಯ್ದುಕೊಳ್ಳುವುದಕ್ಕಾಗಿ ವೆಂಟಿಲೇಟರ್ ಅಳವಡಿಸಲಾಗಿದ್ದು, ಆಸ್ಪತ್ರೆಯ ಬಿಲ್ಲಿನ ಮೊತ್ತ ದಿನೇದಿನೇ ಏರುತ್ತಿದೆ. ಇದರಿಂದ ಮೊತ್ತವನ್ನು ಹೊಂದಿಸಲು ಶ್ರಮಿಸುತ್ತಿದ್ದಾರೆ.

IMG 20181122 WA0007
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಟೀಮ್‍ಲಿಡ್ ಆಗಿದ್ದ ಅಣ್ಣ ಭರತ್, ಎರಡು ವರ್ಷದ ಹಿಂದೆ ರಿಸೆಷನ್ ಕಾರಣಕ್ಕೆ ಕೆಲಸ ಕಳೆದುಕೊಂಡು, ಬೇರೆ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರು..
ತಂಗಿ ಬಿಲ್ವಶ್ರೀ ಹಲವಾರು ಕಡೆಗಳಲ್ಲಿ ಉದ್ಯೋಗ ಮಾಡಿ ಸೂಕ್ತ ಅವಕಾಶಗಳು ಸಿಗದೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ತನ್ನ ಅಣ್ಣನ‌ ಜೊತೆ ಸೇರಿ ಪ್ರಾರಂಭಿಸಿದ್ದಾರೆ. ಹೊಸ ಕಂಪನಿಯಾದ ಕಾರಣ ಇನ್ನೂ ಉತ್ಪಾದನೆ ಅಷ್ಟಾಗಿ ಇರುವುದಿಲ್ಲ.
ಅಮ್ಮನಿಗೆ ಈ ಹಿಂದೆಯೂ ಅನಾರೋಗ್ಯ ಕಾಡಿತ್ತು, ಒಮ್ಮೆ ಹೃದಯಾಘಾತವಾಗಿ ಸರ್ಜರಿಯನ್ನೇ(Open Heart Surgery) ಮಾಡಬೇಕಾಗಿ ಬಂತು, ಅಮ್ಮನನ್ನು ಉಳಿಸಿಕೊಳ್ಳಲು ಭರತ್ ತಾನು ದುಡಿದ ಹಣವನ್ನೆಲ್ಲ ಖರ್ಚು ಮಾಡಿದ್ದ. ಸ್ನೇಹಿತರಿಂದ,‌ಬಂಧುಗಳಿಂದ ಭರಿಸಲಾಗದಷ್ಟು ಸಾಲ ಪಡೆದಿದ್ದ. ಅಮ್ಮನನ್ನು ಉಳಿಸಿಕೊಳ್ಳಲು ಮಾಡಿದ ಹೋರಾಟಕ್ಕೆ ಯಮನೂ ಸೋತು ಹೋಗಿದ್ದ. ಅಮ್ಮನನ್ನು ಮರಳಿ ಮನೆಗೆ ಕರೆದುಕೊಂಡು ಬಂದರು.
ಆದರೆ ವಿಧಿ ಸುಮ್ಮನೆ ಕೂರಲಿಲ್ಲ, ಈ ಬಾರಿ ಅಮ್ಮನ ಕಿಡ್ನಿಯ ಮೇಲೆ ಕಣ್ಣು ಹಾಕಿತ್ತು. ಅಮ್ಮನ ಜೀವ ಉಳಿಯಬೇಕಾದರೆ ತೀವ್ರವಾದ ಸೋಂಕಿನಿಂದ ಕೂಡಿದ್ದ ಒಂದು ಕಿಡ್ನಿಯನ್ನು ತೆಗೆಯಲೇ ಬೇಕಾದ ಸಂದರ್ಭ ಬಂತು. ಅದೊಂದು ಜೀವನ್ಮರಣದ ಹೋರಾಟವಾಗಿತ್ತು. ಭರತ್ ಮತ್ತು ತಂಗಿ ಬಿಲ್ವಶ್ರೀ ಹಗಲು ರಾತ್ರಿ ಆಸ್ಪತ್ರೆಯಲ್ಲಿದ್ದುಕೊಂಡು ಹದಿನೈದು ಇಪ್ಪತ್ತು ದಿನಗಳ ಕಾಲ ಅಮ್ಮನನ್ನು ‌ನೋಡಿಕೊಂಡಿದ್ದಾರೆ. ತನ್ನ ಕಾರಿನಲ್ಲೆ ದಿನದ ಸ್ವಲ್ಪವೇ ಹೊತ್ತು ವಿರಮಿಸುತ್ತಿದ್ದ ಭರತ್. ತನ್ನ ಇನ್ಶುರೆನ್ಸ್‌ ಇಂದ ಸುಮಾರು ಎರಡುಮುಕ್ಕಾಲು ಲಕ್ಷ ರೂಪಾಯಿಗಳನ್ನು ಕೊಟ್ಟ ಚಿಕಿತ್ಸೆಗಾಗಿ. ಅದೇ ಸಮಯದಲ್ಲಿ ಸಮಾಜಬಂಧುಗಳು ನೀವೆಲ್ಲ ತುಂಬ ದೊಡ್ಡಮಟ್ಟದಲ್ಲಿ ಅವರ ಜೊತೆ ನಿಂತು ಸಹಕಾರ ನೀಡಿದ್ದೀರಿ, ಅವರಿಗೆ ಧೈರ್ಯ ನೀಡಿದ್ದೀರಿ. ತಮ್ಮ ಕೈಲಾದ ಸಹಕಾರ ನೀಡಿದ್ದೀರಿ. ಸುಮಾರು ಹತ್ತು ಲಕ್ಷಕ್ಕೂ ಮಿಕ್ಕಿದ್ದ ಆಸ್ಪತ್ರೆಯ ಖರ್ಚನ್ನು ಸಾಧ್ಯವಿರುವ ಎಲ್ಲ ಕಡೆಯಲ್ಲಿ ಸಾಲ ಸೋಲ‌ ಮಾಡಿ ಅಣ್ಣ-ತಂಗಿ ಇಬ್ಬರೂ ಸೇರಿ ಭರಿಸಿ ಅಮ್ಮನನ್ನು ಕಾಪಾಡಿಕೊಂಡರು‌. ಹಗಲೂ ರಾತ್ರಿ ದುಡಿದು ಭರತ್ ಸ್ವಲ್ಪ ಪ್ರಮಾಣದ ಸಾಲ ತೀರಿಸಿದ್ದ.
ಇನ್ನೇನು ಎಲ್ಲ ಮುಗಿಯಿತು, ಸಂತೋಷವಾಗಿ ಜೀವನ ಕಟ್ಟೋಣ ಎನ್ನುವಷ್ಟರಲ್ಲಿ ಮತ್ತೆ ವಿಧಿಗೆ ಯಾಕೋ ಸರಿಕಾಣಲಿಲ್ಲ ಅನ್ಸುತ್ತೆ, ಮತ್ತೊಮ್ಮೆ ಪ್ರಹಾರ ಮಾಡಿದೆ.
ಇದೀಗ ಅನ್ಯಾನ್ಯ ಅಂಗಗಳಲ್ಲಿನ ತೊಂದರೆಯಿಂದಾಗಿ ಐಸಿಯುನಲ್ಲಿ‌ ಅಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯೂ ಕಾಣುತ್ತಿದೆ. ಆದರೆ ಮತ್ತದೆ‌ ಸಮಸ್ಯೆ! ಆಸ್ಪತ್ರೆಯ ಖರ್ಚನ್ನು ನಿಭಾಯಿಸುವುದು ಹೇಗೆ? ಸ್ನೇಹಿತ,ಬಂಧುಗಳ ಹತ್ತಿರ ಈಗಾಗಲೇ ಕೇಳಿ ಆಗಿದೆ, ಅದನ್ನೇ ವಾಪಸ್ ಕೊಡಲಾಗುತ್ತಿಲ್ಲ. ಎಲ್ಲ ರೀತಿಯ ಸಾಲಗಳನ್ನು ಪಡೆದಾಗಿದೆ, ಆ ದಾರಿಯೂ ಮುಚ್ಚಿದೆ. ಆಕಾಶ ನೋಡುತ್ತ ಕೂರುವ ಪರಿಸ್ಥಿತಿ ಅವರದ್ದಾಗಿದೆ. ಅಮ್ಮನ ಆರೋಗ್ಯದ ಕಾಳಜಿ ಒಂದೆಡೆಯಾದರೆ, ಖರ್ಚನ್ನು ನಿಭಾಯಿಸುವ ಚಿಂತೆ ಇನ್ನೊಂದೆಡೆ. ಇವರೂ ಮಾನಸಿಕವಾಗಿ ತುಂಬ ಬಳಲಿದ್ದಾರೆ. ತಮ್ಮ ಜೀವನದ ಏಕೈಕ ಭರವಸೆಯ ಶಕ್ತಿಯಾಗಿರುವ ಅಮ್ಮನನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಕುಟುಂಬದ ಆರ್ಥಿಕ ಸಂಕಷ್ಟ ಅವರನ್ನು ಸಹಾಯಕ್ಕಾಗಿ ಸಮಾಜದತ್ತ ನೋಡುವಂತೆ ಮಾಡಿದೆ. ಸುಮಾರು ₹5ಲಕ್ಷದಷ್ಟು ಬಿಲ್ ಆಗಬಹುದು ಎಂದು ಹೇಳಿದ್ದಾರಂತೆ ವೈದ್ಯರು. ಇಲ್ಲಿಯವರೆಗೆ ₹2.5ಲಕ್ಷದ ಬಿಲ್ಲನ್ನು ಕೊಟ್ಟಿರುತ್ತಾರೆ. ಹಾಗೂ ಹೀಗೂ ಅಣ್ಣ ತಂಗಿ ಸೇರಿ ಸುಮಾರು ₹2 ಲಕ್ಷ ರೂಪಾಯಿಗಳನ್ನು ಹೊಂದಿಸುವುದಾಗಿ ಹೇಳಿದ್ದು, ಉಳಿದ ಹಣಕ್ಕಾಗಿ ನಮ್ಮ ನಿಮ್ಮೆಲ್ಲರ ಸಹಾಯಕ್ಕಾಗಿ ಅಪೇಕ್ಷಿಸಿದ್ದಾರೆ. ಬನ್ನಿ ನಮ್ಮ ಕೈಲಾದ ಸಹಾಯ ಮಾಡೋಣ, ಕುಟುಂಬದಲ್ಲಿ ಸಂತೋಷದ ಜ್ಯೋತಿಯನ್ನು ಹೊತ್ತಿಸೋಣ

RELATED ARTICLES  2ಜಿ ಹಗರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ.

Account Details ಇಲ್ಲಿದೆ:

Bilwashree B.N,
acc no: 9022500101041901,
Karnataka Bank,
kengeri satellite town branch,
IFSC Code: KARB0000902

RELATED ARTICLES  ಉತ್ತರ ಕನ್ನಡದವರು ಬುದ್ದಿವಂತರು ಅವರಿಗೆ ನಾವು ಹೇಳಿಕೊಡುವುದು ಏನೂ ಇಲ್ಲ : ಸಿ.ಎಂ ಸಿದ್ದರಾಮಯ್ಯ.

Google pay and phone pay : 7829347810

ನೀವು ಸಹಾಯ ಮಾಡುವುದರ ಜೊತೆಗೆ, ಇದನ್ನು ಇತರರೊಂದಿಗೆ ಹಂಚಿಕೊಳ್ಳುವುದೂ ಕೂಡ ದೊಡ್ಡಮಟ್ಟಿಗೆ ಉಪಕಾರಿಯಾಗಬಲ್ಲದು..

ಅವರಿಗೆ ಧೈರ್ಯ ಹೇಳಲು ಸಂಪರ್ಕಿಸಬಹುದು : 7829347810