ಕುಮಟಾ: ಪುರಾಣ ಪ್ರಸಿದ್ಧ ಗೋಕಣ೯ದ ಸಾವ೯ಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ಕಾತಿ೯ಕ ಪೌಣಿ೯ಮೆ ಪ್ರಯುಕ್ತ ರಾತ್ರಿ ಶಿಖರ ಹಾಗೂ ದೇವಾಲಯದ ಒಳ-ಹೊರ ಪ್ರಾಕಾರದ ಸುತ್ತ ದೀಪಗಳಿಂದ ಪ್ರಜ್ವಾಲಿಸಿ,ಶ್ರೀ ಮಹಾಬಲೇಶ್ವರ ದೇವರ ಉತ್ಸವವು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ನಡೆಸಿ,ಮಹಾಮಂಗಳಾರತಿ,ಪ್ರಸಾದ ವಿತರಣೆ ನಡೆಯುವುದು.

DSC 7901
ಮಧ್ಯಾಹ್ನ ದಿಂದಲೇ ದೇವಾಲಯದಲ್ಲಿ ಮಹಾಪೂಜೆ-ಬಲಿ ನಡೆಸಿ,ದೇವರ ಉತ್ಸವವು ವನ ಭೋಜನಕ್ಕಾಗಿ ಸಮೀಪದ ಭೀಮಕುಂಡ ಎಂಬ ಸುಂದರ ಗುಡ್ಡ ಪ್ರದೇಶಕ್ಕೆ ತೆರಳಿ,ಅಲ್ಲಿ ಭೀಮಕುಂಡೇಶ್ವರನ ಸನ್ನಿಧಿಯಲ್ಲಿ ಧಾತ್ರೀಹವನವೇ ಮೊದಲಾದ ಧಾಮಿ೯ಕ ಆಚರಣೆ ನಡೆಸಿ,ದೇವಾಲಯದ ಬಾಣಸಿಗರು ವನಭೋಜನಕ್ಕಾಗಿ ಸಿದ್ಧಪಡಿಸಿದ ಊಟೋಪಹಾರಗಳ ನೈವೇದ್ಯ,ಮಂಗಳಾರತಿ,ಪ್ರಾಥ೯ನೆ ನಡೆಸಿದ ನಂತರ ಕೋಟಿತೀಥ೯ದ ದಾರಿಯಲ್ಲಿ ದೇವರ ಉತ್ಸವವು ಸಾಗಿ,ದೇವಾಲಯ ಪ್ರವೇಶಿಸುವುದು.

RELATED ARTICLES  ಮುರೂರು ರಾಮಲೀಲಾ ಮೈದಾನದಲ್ಲಿ ಐದು ದಿನಗಳ ರಾಮಕಥೆಗೆ ಅದ್ಧೂರಿ ಚಾಲನೆ ರಾಮನ ಸೀತಾಪ್ರೀತಿ ಪ್ರಶ್ನಾತೀತ: ರಾಘವೇಶ್ವರ ಶ್ರೀ

ನಂತರ ಸಂಜೆ ಆರುಗಂಟೆಗೆ ದೇವರ ಉತ್ಸವವು ಊರ ಮುಖ್ಯ ರಸ್ತೆಯಲ್ಲಿ ಸಾಗಿ,ಊರ ನಾಗರಿಕರ ಮನೆ-ಮನೆಗಳಿಂದ ಮಂಗಳಾರತಿ ಸ್ವೀಕರಿಸಿ,ದೇವಾಲಯ ಪ್ರವೇಶಿಸಿ,ದೀಪಾರಾಧನೆ ನಡೆಸಿದ ನಂತರ ರಾತ್ರಿ ಹನ್ನೆರಡಲ ಸುಮಾರಿಗೆ ಕೋಟಿತೀಥ೯ದಲ್ಲಿ ದೀಪಾರಾಧನೆ ಹಾಗೂ ತೆಪ್ಪೋತ್ಸವ ನಡೆಸಿ,ದೋಣಿಯಲ್ಲಿ ದೇವರ ಮೂತಿ೯ಹೊತ್ತ ಉತ್ಸವವು ಕೋಟಿತೀಥ೯ದ ಮಧ್ಯೆ ಇರುವ ಕೋಟೇಶ್ವರ ಸನ್ನಿಧಿಗೆ ತಲುಪಿ,ಮಂಗಳಾರತಿ ನಡೆಸಿ,ಪುನಃ ದೋಣಿಯಲ್ಲಿ ದಡಕ್ಕೆ ಬಂದು, ನಾಗೇಶ್ವರ ಓಣಿ ಮಾಗ೯ವಾಗಿ ಸಾಗಿ ದೇವಾಲಯಕ್ಕೆ ಬಂದು,ಮಂಗಳಾರತಿ ನಡೆಸಿ, ದೇವಾಲಯದಿಂದ ರಥದ ಮನೆಗೆ ತೆರಳಿದ ಉತ್ಸವ ಮೂತಿ೯ಯು, ಚಿಕ್ಕ ರಥದಲ್ಲಿ ಕುಳಿತು,ಮುಖ್ಯ ರಥಬೀದಿಯಲ್ಲಿ ಸಾಗಿ.ವೆಕಟರಮಣ ದೇವಾಲಯದ ವರೆಗೂ ಸಾಗಿ,ಅಲ್ಲಿ ಮಂಗಳಾರತಿ ಸ್ವೀಕರಿಸಿ,ರಥದ ಮನೆಗೆ ಮರಳುವ ಮೂಲಕ ರಥೋತ್ಸವವು ಸಂಪನ್ನಗೊಳ್ಳುತ್ತದೆ.

RELATED ARTICLES  ಬೈಕ್ ಮತ್ತು ಟ್ಯಾಂಕರ್ ನಡುವೆ ಅಪಘಾತ : ಧಾರುಣ ಸಾವು ಕಂಡ ಬೈಕ್ ಸವಾರ

ನಂತರ ದೇವಾಲಯ ಪ್ರವೇಶಿಸಿದ ಉತ್ಸವವು ದೇವಾಲಯದಲ್ಲಿ,ಮಹಾ ಮಂಗಳಾರತಿ,ಗ್ರಾಮ.ರಾಜ್ಯ,ರಾಷ್ಟ್ರದ ಕ್ಷೇಮಾಭಿವೃದ್ಧಿಗಾಗಿ,ಸಾಮೂಹಿಕಪ್ರಾಥ೯ನೆ ನಡೆಯುತ್ತದೆ.ನಂತರ ಪ್ರಸಾದ ವಿತರಣೆ ನಡೆದು ಶ್ರೀ ಮಹಾಬಲೇಶ್ವರ ದೇವರ ಕಾತಿ೯ಕೋತ್ಸವವು ಸಂಪನ್ನ ಗೊಳ್ಳಲಿದೆ.

ಇದಕ್ಕೆ ಇನ್ನೊಂದು ಮೆರಗು ಎಂಬಂತೆ ದೇವಾಲಯದ ಸುತ್ತ ಸುಮಾರು ಟ್ರಕ್ ನಷ್ಟು ವಿವಿಧ ಹೂವುಗಳನ್ನು ತಂದು,ಬೆಂಗಳೂರಿನ ನುರಿತ ಅಲಂಕಾರಿಕರನ್ನು ಕರೆಸಿ,ನಿನ್ನೆ ರಾತ್ರಿಯಿದಲೇ ಹೂ ಅಲಂಕಾರದ ತಯಾರಿ ನಡೆಸಿ, ಇಂದು ಕಣ್ಮನ ಸೆಳೆಯುವಂತೆ ಮಾಡಲಾಗಿರುವ ದೇವಾಲಯದವರೊಬ್ಬರು ತನ್ನ ಹೆಸರನ್ನು ಹೇಳಲಿಚ್ಛಿಸದ,ಸೇವೆಯನ್ನು ಕಳೆದಮೂನಾ೯ಲ್ಕು ವಷ೯ಗಳಿಂದ ನಡೆಸುತ್ತಾ ಬಂದಿದ್ದಾರಾದರೂ ಈ ವಷ೯ ವಿಶೇಷ ಅಲಂಕಾರ ನಡೆದಿದ್ದನ್ನು ನೋಡಲು ಬೆಳಿಗ್ಗೆಯಿಂದಲೇ ಜನ ಸಾಗರ ಸೇರಿ,ಹೃನ್ಮನ ತುಂಬಿಸಿಕೊಳ್ಳುತ್ತಿರುವುದು ವಿಶೇಷ ವಾಗಿದೆ.