ಕಾರವಾರ: ಭಾರತೀಯ ವಾಯುಪಡೆಯು ಗ್ರೂಪ್ ‘ವೈ’ [ಐಎಎಫ್(ಎಸ್)] ಟ್ರೇಡ್‍ನಲ್ಲಿ ಏರ್‍ಮೆನ್‍ರನ್ನು ಆಯ್ಕೆ ಪ್ರಕ್ರಿಯೆಗಾಗಿ ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರುನಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.
ಡಿ.5 ರಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ದೇಹದಾಢ್ರ್ಯತೆ, ಲಿಖಿತ ಪರೀಕ್ಷೆ (ಎಟಿ-1, ಎಟಿ11, ಡಿಎಫ್‍ಟಿ ಮತ್ತು ಡಿ.6 ರಂದು ಅರ್ಜಿಗಳ ಭರ್ತಿ ) ಗಳನ್ನು ನಡೆಸಲಾಗುವುದು.
ಡಿ.07 ರಂದು ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣಕನ್ನಡ, ಚಿಕ್ಕ ಮಂಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಮತ್ತು ಉಡುಪಿ ಈ ಜಿಲ್ಲೆಗಳಲ್ಲಿ ದೇಹದಾಢ್ರ್ಯತೆ, ಲಿಖಿತ ಪರೀಕ್ಷೆ (ಎಟಿ-1, ಎಟಿ-11, ಡಿಎಫ್‍ಟಿ ಮತ್ತು ಡಿ.8 ರಂದು ಅರ್ಜಿಗಳ ಭರ್ತಿ ) ಗಳನ್ನು ನಡೆಸಲಾಗುವುದು.
ಡಿ.5 ಮತ್ತು 7 ರಂದು ನಡೆಯುವ ಲಿಖಿತ ಪರೀಕ್ಷೆಯಲ್ಲಿ ಉತ್ತಿರ್ಣರಾಗುವಂಥ ಅಭ್ಯರ್ಥಿಗಳು ನಂತರದ ದಿನದಂದು ಉಳಿದ ಆಯ್ಕೆ ಪ್ರಕ್ರಿಯೆಗಾಗಿ ನಡೆಯುವ ಲಿಖಿತ ಪರೀಕ್ಷೆಗೆ ಹಾಜರಿರಬೇಕು.
ವಿದ್ಯಾರ್ಹತೆ ಹಾಗೂ ಇತರೆ ಹೆಚ್ಚಿನ ವಿವರಗಳಿಗೆ ಭಾರತೀಯ ವಾಯುಪಡೆಯ ತಾಣವಾದ http://www.airmenselection.cdac.in ಗೆ ಲಾಗ್‍ಆನ್ ಮಾಡುವುದು. ಅಥವಾ 07 ಏರ್ ಮೆನ್ ಆಯ್ಕೆ ಕೇಂದ್ರ ಸಂ.1 ಕಬ್ಬನ್ ಪಾರ್ಕ್ ರಸ್ತೆ, ಬೆಂಗಳೂರು-560001 ದೂ.ಸಂ:08025592199 ಇ-ಮೇಲ್ [email protected]ನ್ನು ಅಥವಾ ಅಭ್ಯರ್ಥಿಗಳು ಹತ್ತಿರದ ಜಿಲ್ಲಾ ಉದ್ಯೋಗ ಅಧಿಕಾರಿಯವರನ್ನು ಸಹ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.