ಕುಮಟಾ : ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಬಿ.ಕೆ.ಬಂಡಾರಕರ ಅವರ ಸರಸ್ವತಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಕಾಲೇಜಿನ ಆವಾರದಲ್ಲಿ ನವೆಂಬರ್ 24 ಶನಿವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ.
1993 ರಲ್ಲಿ ಸ್ಥಾಪಿತವಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ ಭಾರತೀಯ ಸಂಸ್ಕøತಿ ಸಂಪ್ರದಾಯದ ತಳಹದಿಯಲ್ಲಿ ಶಿಕ್ಷಣ ನೀಡುತ್ತಾ ತನ್ನದೇ ಆದ ವೈವಿದ್ಯತೆಯ ಮೂಲಕ ಪ್ರಸಿದ್ಧಿ ಪಡೆದಿದೆ. 2018ನ್ನು ಸಂಸ್ಥೆಯು ಬೆಳ್ಳಿ ಹಬ್ಬ ವರ್ಷವಾಗಿ ಆಚರಿಸುತ್ತಿದ್ದು ಈ ಶುಭ ಸಂದರ್ಭದಲ್ಲಿ “ಇನ್ಪೋಸಿಸ್ ಫೌಂಡೆಶನ್” ಬೆಂಗಳೂರು ಅವರು ನಿರ್ಮಿಸಿಕೊಟ್ಟ “ಇನ್ಪೋಸಿಸ್ ಬ್ಲಾಕ್” ಹೆಸರಿನ ಅಂತಸ್ಥನ್ನು ಒಳಗೊಂಡಿರುವ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಗಳು ಮತ್ತು ಪಟ್ಟಶಿಷ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ದಿವ್ಯ ಸಾನಿಧ್ಯ ನೀಡಿ ಕಟ್ಟಡದ ಲೋಕಾರ್ಪಣಕಾರ್ಯ ನಡೆಸಿಕೊಡಲಿದ್ದಾರೆ.
24 ನವೆಂಬರ್ 2018 ಶನಿವಾರ ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ದಿನಕರ ಶೆಟ್ಟಿ ಹಾಂಗ್ಯೋ ಮಿಲ್ಕ್ಸ ಪ್ರೈವೇಟ ಲಿಮಿಟೆಡನ ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀ ಪ್ರದೀಪ ಜಿ ಪೈ, ಕಲಭಾಗ ಗ್ರಾಮ ಪಂಚಾಯತನ ಅಧ್ಯಕ್ಷರಾದ ಶ್ರೀ ವಿರುಪಾಕ್ಷ ನಾಯ್ಕ ಮುಖ್ಯ ಅತಿಥಿಗಳಾಗಿ ಹಾಜರಿರುವರು.
ಈ ಎಲ್ಲಾ ಕಾರ್ಯಕ್ರಮಳಿಗೆ ಸಂಸ್ಥೆಯ ಹಿತೈಶಿಗಳು, ಸಾರ್ವಜನಿಕರು, ಪೂರ್ವ ವಿದ್ಯಾರ್ಥಿಗಳು, ಪಾಲಕ ವೃಂದದವರು ಹಾಜರಿದ್ದು ಸಂಸ್ಥೆಯ ಘನ ಉದೇಶವನ್ನು ಸಾಕಾರಗೊಳಿಸಲು ಬೆಂಬಲ ನೀಡಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಠಲ ಆರ್ ನಾಯಕ ಹಾಗೂ ಕಾರ್ಯದರ್ಶಿಗಳಾದ ಶ್ರೀ ಮುರುಳೀಧರ ಪ್ರಭು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.