ಕುಮಟಾ: ತಾಂಡವ ಕಲಾ ನಿಕೇತನ, ಕುಮಟಾ ವೈಭವ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಯಯೋಗದಲ್ಲಿ ಇಂದಿನಿಂದ ಕುಮಟಾದ ಪುರಭವನದಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವ ಉದ್ಘಾಟಿಸುತ್ತಿರುವ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ, ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಹಾಗೂ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಂಡವ ನಿಕೇತನ ಅಧ್ಯಕ್ಷರಾದ ಮಂಜುನಾಥ್ ನಾಯ್ಕ, ವೈಭವದ ಗೌರವಾಧ್ಯಕ್ಷ ನಾಗರಾಜ ನಾಯಕ ತೊರ್ಕೆ, ಚಿತ್ರ ನಿರ್ದೇಶಕಿ ಚಂಪಾ ಶೆಟ್ಟಿ ಮತ್ತಿತರರನ್ನು ಕಾಣಬಹುದು.
ಕುಮಟಾ ತಾಲೂಕು. ಕ.ಸಾ.ಪ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಸ್ವಾಗತಿಸಿದರು, ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ ಪ್ರಾರ್ಥಿಸಿದರು, ಕಾರವಾರ ತಾಲೂಕು ಕ.ಸಾ.ಪ.ಅಧ್ಯಕ್ಷ ನಾಗರಾಜ ಹರಪನಹಳ್ಳಿ ವಂದಿಸಿದರು. ವೈಭವದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕೃಷ್ಣಾನಂದ ಭಟ್ಟ ನಿರ್ವಹಿಸಿದರು.