ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಬಿ.ಕೆ.ಭಂಡಾರಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ಇನ್ಪೋಸಿಸ್ ಬ್ಲಾಕ್ ಲೋಕಾರ್ಪಣೆ ಕಾರ್ಯಕ್ರಮವನ್ನು ಗೋಕರ್ಣ ಪರ್ತಗಾಳಿ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಹಾಗೂ ಪಟ್ಟಶಿಷ್ಯ ಶ್ರೀ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ಇವರು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡುತ್ತ ಶಿಕ್ಷಣದೊಂದಿಗೆ ಸಂಸ್ಕಾರ ನೀಡುತ್ತಾ ಜಿಲ್ಲೆಯಲ್ಲಿಯೇ ಅಗ್ರಸ್ಥಾನ ಪಡೆದು ಕೊಂಡಿರುವುದು ಕುಮಟಾದ ಹೆಮ್ಮೆಯ ಕೊಂಕಣ ಎಜ್ಯುಕೇಆನ ಟ್ರಸ್ಟನ ಸಮೂಹ ಸಂಸ್ಥೆಗಳು ಎಂದು ನುಡಿದರು. ಅದೇ ರೀತಿ ಇನ್ನೋರ್ವ ಅತಿಥಿಗಳಾದ ಹಾಂಗ್ಯೊ ಐಸ್‍ಕ್ರೀಂನ ಮ್ಯಾನೇಂಜಿಗ್ ಡೈರೆಕ್ಷರ್ ಶ್ರೀ ಪದೀಪ ಪೈ ಶುಭ ಹಾರೈಸಿದರು.
ನಂತರ ಆರ್ಶೀರ್ವಚನವಿತ್ತ ಸ್ವಾಮೀಜಿಯವರು ಶುಭಮೂಹೂರ್ತದಲ್ಲಿ ಈ ವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ್ದೇವೆ, ವಿದ್ಯಾರ್ಥಿಗಳು ವಿದ್ಯೆ, ವಿನಯ, ವಿವೇಕ, ವಿವೇಚನೆ ಬೆಳೆಸಿಕೊಂಡು ಸಂಸ್ಕಾರ ಪಡೆದುಕೊಳ್ಳಬೇಕು. ಸಂಸ್ಥೆಯು ವಿಸ್ತಾರವಾಗಿ ಬೆಳೆದು ಹಲವಾರು ವಿದ್ಯಾರ್ಥಿಗಳಿಗೆ ಅಸಂಖ್ಯಾತವಾಗಿ ವಿದ್ಯಾದಾನ ಮಾಡಲಿ ಎಂದು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಅತಿಥಿ ಮಹೋದಯರಾದ ಮಾನ್ಯ ದಿನಕರ ಶೆಟ್ಟಿ ಶಾಸಕರು ಕುಮಟಾ ಹೊನ್ನವರ ಕ್ಷೇತ್ರ, ಶ್ರೀ ಪ್ರದೀಪ ಪೈ, ಹ್ಯಾಗ್ಯೋ ಐಸ್‍ಕ್ರೀಂ ಸಂಸ್ಥಾಪಕರು, ಶ್ರೀ ವಿರೂಪಾಕ್ಷ ನಾಯ್ಕ ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಗತಿಗೆ ಕಾರಣ ಕರ್ತರಾದ ಮತ್ತು ಸಂಸ್ಥೆಗೆ ಉದಾರ ದಾನವಿತ್ತ ದಾನಿಗಳಾದ ದಿ|| ಬಿ. ಕೆ. ಭಂಡಾರಕರ್ ಕುಟುಂಬ, ಪದ್ಮನಾಭ ಆರ್ ಕಿಣ ಕುಟುಂಬ, ದಿ|| ಕಾಶೀನಾಥ ನಾಯಕ ಕುಟುಂಬ, ರವಿ ಪೈ, ದಾಮೋದರ ಭಟ್, ವಿಷ್ಣು ಶ್ಯಾನಭಾಗ್, ಸದಾನಂದ ನಾಯಕ, ಗಿರೀಶ ಶ್ಯಾನಭಾಗ, ಸುಕ್ರು ಪಟಗಾರ, ಅಭಯ ಕೋಟಿ ಅವರಿಗೆ ಸನ್ಮಾನ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದ ಘೋಷ ಮತ್ತು ಪ್ರಾರ್ಥನೆ ಮಾಡಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟನ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ರವರು ಪ್ರಾಸ್ತಾವಿಕ ಮಾತುಗಳಾಡಿದರು. ಸರಸ್ವತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸುಲೋಚನಾ ರಾವ್. ಬಿ. ಸಂಸ್ಥೆಯ ಕಿರು ಪರಿಚಯ ಮಾಡಿದರು. ಮತ್ತು ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು ರವರು ವಂದಿಸಿದರು ಮತ್ತು ಶಿಕ್ಷಕರಾದ ಗಣೇಶ ಜೋಶಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಮಾತೃ ಮಂಡಳಿಯವರು, ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕರವರು ಮತ್ತು ಆಡಳಿತ ಮಂಡಳಿಯ ಸದ್ಯಸರು ಹಾಗೂ ಸಂಸ್ಥೆಯ ಅಂಗ ಸಂಸ್ಥೆಗಳ ಮುಖ್ಯಸ್ಥರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.