ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕರಿಂದ ಬಿಟ್ಟು ಸಣ್ಣ ಮಕ್ಕಳವರೆಗೂ ಹೊರಾಂಗಣ ಆಟಗಳನ್ನು ಬಿಟ್ಟು ಮೊಬೈಲ್ ಗೇಮ್ ಗಳನ್ನು ಹೆಚ್ಚು ಆಡುತ್ತಾರೆ. ಈಗ ಇಂಟರ್ನೆಟ್ ಕೂಡ ಕಡಿಮೆ ದರಕ್ಕೆ ಸಿಗುತ್ತಿರುವ ಕಾರಣ ಆನ್ ಲೈನ್ ಗೇಮ್ ಗಳನ್ನು ಹೆಚ್ಚು ಹೆಚ್ಚು ಆಡುತ್ತಿದ್ದಾರೆ. ಗೇಮ್ ಗಳೆಂದರೆ ಕೇಳಬೇಕೆ, ದಿನಕ್ಕೆ ಒಂದೊಂದು ಹೊಸ ಗೇಮ್ ಗಳು ಬರುತ್ತವೆ. ಕೆಲವು ಗೇಮ್ ಗಳಂತು ಟ್ರೆಂಡ್ ಅನ್ನೇ ಸೃಷ್ಟಿ ಮಾಡಿ ಬಿಡುತ್ತವೆ. ಈ ಹಿಂದೆ ಬ್ಲೂ ವೇಲ್ ಗೇಮ್ ಹೆಚ್ಚಿನ ಸದ್ದು ಮಾಡಿ ಹಲವರ ಪ್ರಾಣ ಸಹ ತೆಗೆದಿದ್ದು ನಿಮಗೆ ನೆನಪಿದೆ ಪ್ರತಿ ನಿತ್ಯ ಪೇಪರ್ ನಲ್ಲಿ ಒಂದು ಗೇಮ್ ಗೋಸ್ಕರ ಸತ್ತಿರುವ ಜನರ ಬಗ್ಗೆ ನೀವೇ ಓದಿದ್ದೀರಿ.

ಇತ್ತಿಚೆಗೆ ಎಲ್ಲರ ಮೊಬೈಲ್ ನಲ್ಲೂ ಡೌನ್ ಲೋಡ್ ಆಗುತ್ತಿರುವ ಗೇಮ್ ಎಂದರೆ PUB G. ಸ್ಕೂಲ್ ಮಕ್ಕಳು, ಕಾಲೇಜ್ ವಿದ್ಯಾರ್ಥಿಗಳು, ಈಗಂತೂ ಕೆಲಸಕ್ಕೆ ಹೋಗುವ ಜನರು ಈ ಗೇಮ್ ನ ಆಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಗೇಮ್ ಜನರನ್ನು ತನ್ನ ಹತ್ತಿರಕ್ಕೆ ಸೆಳೆದಿದೆ. PUB G ಒಂದು ಆನ್ ಲೈನ್ ಆಟ ಆಗಿದ್ದು ಇದು ಆಕ್ಷನ್ ಮತ್ತು ಅಡ್ವೇಂಚರಸ್ ಗೇಮ್. ಒಂದು ಸಲ ಆಡಲು ಶುರು ಮಾಡಿದರೆ ಅದಕ್ಕೆ ಅಡಿಕ್ಟ್ ಆಗಿ ಬಿಡುತ್ತಾರೆ. ಸರಿ ಸುಮಾರು ಪ್ರತಿ ನಿತ್ಯ ಇಡೀ ಪ್ರಪಂಚದಲ್ಲಿ 100 ಮಿಲಿಯನ್ ಜನಗಳು ಆಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಕೇವಲ ಇಂದು ಅಂದಾಜು ಮಾತ್ರ ಸರಿಯಾದ ಲೆಕ್ಕ ಇನ್ನು ಸಿಕ್ಕಿಲ್ಲ.

RELATED ARTICLES  ನಾಪತ್ತೆಯಾಗಿದ್ದ ವ್ಯಕ್ತಿ : ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ.

ಈ ಆಟವನ್ನು ಆಡುವುದರಿಂದ ಆಗುವ ಅಪಾಯಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಹೆಚ್ಚಾಗಿ ಒಂದೇ ಆಟವನ್ನು ಆಡುವುದರಿಂದ ನಮ್ಮ ಮೆದುಳಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಇದರಿಂದ ನಮ್ಮ ಏಕಾಗ್ರತೆಯ ಪ್ರಮಾಣ ಕಡಿಮೆ ಆಗುತ್ತದೆ. PUB G ಆಟ ಎಷ್ಟರ ಮಟ್ಟಿಗೆ ಟ್ರೆಂಡ್ ಅನ್ನು ಸೃಷ್ಟಿ ಮಾಡಿದೆ ಎಂದರೆ ಅದನ್ನು ಆಡುವವರು ಊಟ, ತಿಂಡಿ, ನಿದ್ದೆ, ಬಿಟ್ಟು ಈ ಆಟವನ್ನು ಆಡುತ್ತಿದ್ದಾರೆ. ಕೆಲಸಕ್ಕೆ ಹೋಗುವವರು ತಮ್ಮ ಕೆಲಸವನ್ನೇ ಬಿಟ್ಟು ಆಟ ಆಡುತ್ತಿದ್ದಾರೆ. ಈ ಆಟವನ್ನು ಒಬ್ಬರೇ ಅಥವ ಇಬ್ಬರು ಜೋಡಿಯಾಗಿ ಅಥವ ನಾಲ್ಕು ಜನ ಜೋಡಿಯಾಗಿ ಆಡಬಹುದು. ಒಬ್ಬರಿಗೂಬ್ಬರು ಸಹಾಯ ಮಾಡಿಕೊಂಡು ಎದುರಾಳಿಯನ್ನು ಕೊಂದು ಆಕುವ ಆಟವಿದು. ಕೊನೆಗೆ ಯಾರು ಉಳಿಯುತ್ತಾರೆ ಅವರೇ ಈ ಆಟದ ವಿನ್ನರ್. ವಿನ್ನರ್ ಗೆ ಕೊನೆಗೆ ಚಿಕನ್ ಡಿನ್ನರ್ ಊಟದ ಅವಾರ್ಡ್ ಕೊಡಲಾಗುತ್ತದೆ. ಗೋಲ್ಡ್ ಸಿಲ್ವರ್ ಕ್ರೌನ್ ಈ ರೀತಿ ಅನೇಕ ಕ್ಲಾಸ್ ಗಳು ಸಹ ನೀಡುತ್ತಾರೆ,

ಇದನ್ನ ಎಲ್ಲರು ಒಟ್ಟಿಗೆ ಸೇರಿ ಆಡುವುದರಿಂದ ರಿಯಾಲಿಟಿ ಯಲ್ಲಿ ಆಡುತ್ತಿರುವ ಅನುಭವ ಆಗುತ್ತದೆ. ಒಬ್ಬರಿಗೆ ಒಬ್ಬರು ಸಹಾಯ ಮಾಡದಿದ್ದರೆ ನಿಜವಾಗಿಯೂ ಜಗಳ ಆಡುತ್ತಾರೆ. ಇದರಿಂದ ಗೆಳೆಯರ ಮೇಲೆ ದ್ವೇಷ ಉಂಟಾಗುತ್ತದೆ. ಇದನ್ನ ಪ್ರತಿ ದಿನ ಆಡುವುದರಿಂದ ಆಡುವವರು ಈ ಗೇಮ್ ಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಇದರಿಂದ ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದು ಕೊಳ್ಳುತ್ತಾರೆ. ತಮ್ಮ ಸುತ್ತ ಮುತ್ತ ಏನು ನೆಡೆಯುತ್ತಿದೆ ಎಂಬ ಅನುಭವವೇ ಇರಲ್ಲ. ಯಾರಾದರು ಕಾಲ್ ಮಾಡಿದರೆ ಫೋನ್ ರಿಸೀವ್ ಮಾಡುವುದಿಲ್ಲ. ಊಟ ತಿಂಡಿ ನಿದ್ದೆ ಬಿಟ್ಟು ಆಡುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುವುದು.

RELATED ARTICLES  ಕಬ್ಬು ತುಂಬಿಕೊಂಡು ಹೋಗಿತ್ತಿದ್ದ ಲಾರಿ ಪಲ್ಟಿಯಾಗಿ ಐವರಿಗೆ ಗಾಯ

ಅಮೇರಿಕಾದ ಒಂದು ಫ್ರನ್ಸ್ಕೋ ವಿಶ್ವವಿದ್ಯಾನಿಲಯ ಪ್ರತಿ ನಿತ್ಯ ನಾಲ್ಕು ಗಂಟೆಗೂ ಹೆಚ್ಚು ಸಮಯ ಪಬ್ ಜಿ ಆಟ ಆಡುತ್ತಿರುವ ಯುವಕ ಮತ್ತು ಮಕ್ಕಳನ್ನು ಸಂಪರ್ಕ ಮಾಡಿದೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ಮೆದುಳಿನಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿರುವುದು ಮತ್ತು ಅವರ ಐ ಕ್ಯೂ ಅಂದ್ರೆ ಬುದ್ದಿಶಕ್ತಿ ಕಡಿಮೆ ಆಗಿರೋದು ಸಾಬೀತಾಗಿದೆ. ನಮ್ಮ ಭಾರತ ದೇಶದಲ್ಲೇ ನಾಲ್ಕು ಕೋಟಿಗೂ ಹೆಚ್ಚು ಯುವಕರು ಮಕ್ಕಳು ಮತ್ತು ಯುವತಿಯರು ಈ ಗೇಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಆಟ ಆಡ್ತಾ ಇದ್ದಾರೆ ಎಂದು ವರದಿ ಬಂದಿದೆ. ಸಮಯ ಸಿಕ್ಕಾಗ ಅಪರೂಪಕ್ಕೆ ಆಟ ಆಡುವ ಜನಕ್ಕೆ ಯಾವುದೇ ರೀತಿಯ ಸಮಸ್ಯೆ ಬಂದಿಲ್ಲ ಆದರೆ ಪ್ರತಿ ನಿತ್ಯ ನಾಲ್ಕು ಗಂಟೆಗಳಿಗೂ ಹೆಚ್ಚು ಆಡುತ್ತಿರುವ ಜನಕ್ಕೆ ಹಲವು ರೀತಿಯ ಸಮಸ್ಯೆ ಬಂದಿರುವುದು ಸತ್ಯ. ಆದರಿಂದ ಎಲ್ಲರು ಆಟವನ್ನ ಆಟದ ರೀತಿ ಆಡಿ ಆದ್ರೆ ಅದು ನಿಯಮಿತವಾಗಿ ಇರಲಿ. ಅದಕ್ಕೆ ಅಡಿಕ್ಟ್ ಆದರೆ ಅದು ನಮ್ಮ ಆರೋಗ್ಯ ಮತ್ತು ಮನಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ.