ಅಂಕೋಲಾ :ಉತ್ತರ ಕನ್ನಡ ಜಿಲ್ಲಾ ಪ.ಪೂ ಕಾಲೇಜುಗಳ ಸಾಂಸ್ಕೃತಿಕ ಕಲೋತ್ಸವವು ಮುಂಡಗೋಡಿನ ಲೋಯಿಲಾ ಪ.ಪೂ ಕಾಲೇಜಿನಲ್ಲಿ ನಡೆಯಿತು. ಈ ಕಲೋತ್ಸವದಲ್ಲಿ ಅಂಕೋಲದ ಗೋಖಲೆ ಸೆಂಟನರಿ ಪ.ಪೂ ಕಾಲೇಜನ ವಿದ್ಯಾರ್ಥಿಗಳು ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಶ್ರೇಯಾ ನಾಯಕ ಪ್ರಥಮ ಪಿ.ಯು.ಸಿ
ಜನಪದ ಗೀತೆ ಸ್ಪರ್ಧೆಯಲ್ಲಿ ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀ ನಾಗರಾಜ ದಿವಗಿಕರ ಅವರ ಸಂಗ್ರಹ, ನಿರ್ದೇಶನದ ಜುಂಜಪ್ಪನ ಪದವನ್ನು ಹಾಡುವುದರ ಮೂಲಕ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ, ಯುಕ್ತಾ ನಾಯಕ ದ್ವಿತೀಯ ಪಿ.ಯು.ಸಿ ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯರಾದ ಡಾ.ಇಮ್ತಿಯಾಜ್ ಖಾನ್ ಅವರು, ಕೆನರಾ ವೆಲ್ ಫೆರ್ ಟ್ರಸ್ಟಿನ ಧರ್ಮದರ್ಶಿಗಳು ,ಕಾರ್ಯದರ್ಶಿಗಳು, ಆದ ಶ್ರೀ ಕೆ ವಿ ಶೆಟ್ಟಯವರು,ಸಾಹಿತಿಗಳಾದ ಶ್ರಿವಿಷ್ಣು ನಾಯ್ಕ ಅವರು, ಶ್ರೀಮತಿ ಸುಜಾತಾ ಲಾಡ ಅವರು, ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.