ಕುಮಟಾ:ಹೆಗಡೆಯ ಗ್ರಾಮದೇವರಾದ ಶ್ರೀ ಹಿರೇಬೀರ ದೇವರ ಕಾರ್ತಿಕ ದೀಪೋತ್ಸವವು ಇದೇ ಬರುವ ದಿ- 07-12-2018 ಶುಕ್ರವಾರ ದಿವಸ ನಡೆಯಲಿದ್ದು, ಕಾರ್ತಿಕ ದೀಪೋತ್ಸವ ನಿಮಿತ್ತ ಶ್ರೀ ಹಿರೇಬೀರ ದೇವಸ್ಥಾನದಲ್ಲಿ ಸಂಜೆ 6 ಗಂಟೆಯಿಂದ ಸಹಸ್ರ ದೀಪೋತ್ಸವ, ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಯಕ್ಷಗಾನ ಇತ್ಯಾದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹಿನ್ನೆಲೆ ಇಲ್ಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ , ದೀಪವನ್ನು ಬೆಳಗಿಸಿ, ಪ್ರಸಾದ ಸ್ವೀಕರಿಸಿ ಶ್ರೀ ಹಿರೇಬೀರ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ಹಿರೇಬೀರ ದೇವರ ಕಾರ್ತಿಕ ದೀಪೋತ್ಸವ ಸಮಿತಿ ಹೆಗಡೆಯ ಅಧ್ಯಕ್ಷರು ವಿನಂತಿಸಿದ್ದಾರೆ.