ಕುಮಟಾ: ಚಿತ್ರನಟ ಅಂಬರೀಶ್ ಹಾಗೂ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಶರೀಪ್ ನಿಧನದ ಹಿನ್ನೆಲೆಯಲ್ಲಿ ಕುಮಟಾ ವೈಭವದ ಐದನೇ ದಿನವಾದ ಇಂದಿನ ಸಭಾ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ.
ಕುಮಟಾ ವೈಭವದ ರುವಾರಿಗಳೂ ಹಾಗೂ ತಾಂಡವ ಕಲಾನಿಕೇತನದ ಅಧ್ಯಕ್ಷರಾದ ಶ್ರೀ ಮಂಜುನಾಥ ನಾಯ್ಕರವರನ್ನು ಸಂಪರ್ಕಿಸಿದಾಗ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದರು.
ಚಿತ್ರನಟ ಅಂಬರೀಶ್ ಹಾಗೂ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಶರೀಪ್ ಅವರ ಅಗಲುವಿಕೆಯ ನೋವನ್ನು ವ್ಯಕ್ತಪಡಿಸಿದ ಅವರು ಸರ್ಕಾರದ ಆದೇಶದಂತೆ ಹಾಗೂ ಅಗಲುವಿಕೆಯ ಸಂತಾಪ ಸೂಚಕವಾಗಿ ನಾವು ಕುಮಟಾ ವೈಭವದ ಸಭಾ ಕಾರ್ಯಕ್ರಮವನ್ನು ನಡೆಸುವುದಿಲ್ಲ. ಸಂತಾಪ ಸೂಚನೆಮಾಡಲಾಗುವುದು ಎಂದರು.
ಸಭಾ ಕಾರ್ಯಕ್ರಮ ಹೊರತುಪಡಿಸಿ ಕುಮಟಾ ವೈಭವದ ವ್ಯಾಪಾರ ಮಳಿಗೆಗಳು ಜನತೆಯ ಅನುಕೂಲಕ್ಕಾಗಿ ಲಭ್ಯವಿರುವುದು ಎಂದು ಅವರು ಮಾಹಿತಿನೀಡಿದ್ದಾರೆ.
ಇಂದು ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಸಂಯೋಜಿಸುವ ಬಗ್ಗೆಯೂ ಪ್ರಯತ್ನಿಸಲಾಗುವುದು ಎಂದು ಸತ್ವಾಧಾರ ಬಳಗದವರು ಸಂಪರ್ಕಿಸಿದಾಗ ಮಂಜುನಾಥ ನಾಯ್ಕ ಮಾಹಿತಿ ನೀಡಿದರು.