ಬೆಂಗಳೂರು: ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಇಂದು ಕಂಠೀರವ ಸ್ಟುಡಿಯೋದಲ್ಲಿ ನಟಸಾರ್ವಭೌಮ, ದಿವಂಗತ ಡಾ| ರಾಜಕುಮಾರ್ ಅವರ ಸಮಾಧಿ ಸಮೀಪದಲ್ಲೇ ಅಂಬರೀಶ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ.
ರಾಜಕುಮಾರ್ ಹಾಗೂ ಅಂಬರೀಶ್ ಅವರು ಒಡಹುಟ್ಟಿದ್ದವರು ಚಿತ್ರದಲ್ಲಿ ಅಭಿನಯಿಸಿದ್ದು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅಂತೆ ಅವರಿಬ್ಬರ ಸಮಾಧಿಯನ್ನು ಒಂದೇ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಅದಾಗಲೇ ಡಾ| ರಾಜ್ ಸ್ಮಾರಕ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದೆ. ಈಗ ಇದರ ಪಕ್ಕದಲ್ಲೇ ಅಂಬರೀಶ್ ಅವರ ಸ್ಮಾರಕವನ್ನು ನಿರ್ಮಿಸಲಾಗುತ್ತದೆ.
ಇನ್ನು ಕನ್ನಡದ ಚಿತ್ರರಂಗದ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಮೂರು ನಟರನ್ನು ಬಿಂಬಿಸಲಾಗುತ್ತಿದೆ. ರಾಜಕುಮಾರರನ್ನು ಬ್ರಹ್ಮ, ವಿಷ್ಣುವಾಗಿ ವಿಷ್ಣುವರ್ಧನ ಹಾಗೂ ಮಹೇಶ್ವರನಾಗಿ ಅಂಬರೀಶ್ ಅವರನ್ನು ನೋಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂವರು ದಿಗ್ಗಜ ನಟರ ಸ್ಮಾರಕ ಒಂದೇ ಕಡೆ ಇರಲಿ ಎಂಬ ಉದ್ದೇಶವನ್ನು ಹೊಂದಿರುವ ರಾಜ್ಯ ಸರ್ಕಾರ ಅಂಬರೀಶ್ ಅವರ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲು ತೀರ್ಮಾನಿಸಿದೆ.