ಮೇಷ 
ಧನಾಗಮನಕ್ಕೆ ಕೊರತೆ ಇರದು. ನಿಮ್ಮ ಪರಿಶ್ರಮದ ಪ್ರಭಾವ ವೃತ್ತಿರಂಗದಲ್ಲಿ ಮುನ್ನಡೆಗೆ ಸಾಧಕವಾಗುತ್ತದೆ. ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ದಿನಾಂತ್ಯ ಕಿರು ಸಂಚಾರವಿದೆ.

ವೃಷಭ 
ಹಳೆ ಮಿತ್ರರ ಆಗಮನದಿಂದ ಸಂತಸ ತರುತ್ತದೆ. ರಾಜಕಾರಣಿಗಳಿಗೆ ತಮ್ಮ ಕ್ಷೇತ್ರದಲ್ಲಿ ಕಾರ್ಯಸಾಧನೆಗೆ ಅನುಕೂಲವಾದೀತು. ದಾಂಪತ್ಯದಲ್ಲಿ ಶುಭವಾರ್ತೆ ಸಂಚಾರದಲ್ಲಿ ಜಾಗ್ರತೆ.

ಮಿಥುನ 
ವ್ಯಾಪಾರ ವ್ಯವಹಾರಗಳು ಲಾಭಕರ ವಾಗಲಿವೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯವಿದೆ. ಆರ್ಥಿಕಸ್ಥಿತಿ ಆಗಾಗ ಏರುಪೇರಾಗಲಿದೆ. ಅವಿವಾಹಿತರಿಗೆ ಪ್ರಯತ್ನಬಲ ಮುಖ್ಯವಾದೀತು.

ಕಟಕ 
ವೃತ್ತಿರಂಗದಲ್ಲಿ ಮುನ್ನಡೆ ತೋರಿ ಬಂದರೂ ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುತ್ತದೆ. ದೂರ ಸಂಚಾರಕ್ಕೆ ಹೊರಡುವ ಸಾಧ್ಯತೆ ತೋರಿ ಬಂದೀತು. ನಿರುದ್ಯೋಗಿಗಳಿಗೆ ನಿರಾಶೆ ತಂದೀತು.

RELATED ARTICLES  ಡಿಸೆಂಬರ್ 15 ರಿಂದ ಶಾಲೆಗಳು ರೀ ಓಪನ್? ನಡೆದಿದೆ ಚರ್ಚೆ

ಸಿಂಹ 
ಬಂಧುಗಳ ಸತ್ಕಾರದಿಂದ ಸಂತಸ ತರಲಿದೆ. ಆಲಂಕಾರಿಕ ವಸ್ತುಗಳು ಮನೆಗೆ ಬರಲಿವೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಫ‌ಲಸಿಗದು. ಸಾಂಸಾರಿಕವಾಗಿ ತುಸು ಸಮಾಧಾನ ಸಿಗಲಿದೆ.

ಕನ್ಯಾ 
ಆತ್ಮ ವಿಶ್ವಾಸದಿಂದ ಮುಂದುವರಿಯಿರಿ. ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾಗಲಿದೆ. ದೂರ ಸಂಚಾರದಿಂದ ದೇಹಾಯಾಸವಾದರೂ ಸಂತಸ ಇರುತ್ತದೆ. ಆರ್ಥಿಕಸ್ಥಿತಿ ಸಮಾಧಾನಕರವಿದೆ.

ತುಲಾ 
ಧನಾಗಮನಕ್ಕೆ ಕೊರತೆ ಇರದು. ಶುಭಕಾರ್ಯಗಳಿಗಾಗಿ ಹಿರಿಯರೊಡನೆ ಸಮಾಲೋಚನೆ ಇರುತ್ತದೆ. ವೃತ್ತಿರಂಗದಲ್ಲಿ ನಿಶ್ಚಿತ ರೂಪದಲ್ಲಿ ಯಶಸ್ಸು ಸಿಗಲಿದೆ. ದಿನಾಂತ್ಯ ಶುಭವಿದೆ.

ವೃಶ್ಚಿಕ 
ಸಾಂಸಾರಿಕವಾಗಿ ಸುಖ ಶಾಂತಿ ತುಸು ತೋರಿ ಬರಲಿದೆ. ಆರೋಗ್ಯದಲ್ಲಿ ಉದಾಸೀನತೆ ತೋರದಿರಿ. ಧನಾಗಮನಕ್ಕೆ ಕೊರತೆ ಕಂಡು ಬರುತ್ತದೆ. ಅನಿರೀಕ್ಷಿತ ಅತಿಥಿಗಳು ಬರಲಿದ್ದಾರೆ.

RELATED ARTICLES  ಕೋಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ಭೀಕರ ಅಗ್ನಿ ದುರಂತ: 250 ಮಂದಿ ರಕ್ಷಣೆ.

ಧನು 
ನಿಮ್ಮ ಪ್ರಯತ್ನಬಲವು ಕಾರ್ಯಸಾಧನೆಗೆ ಸಾಧಕವಾಗಲಿದೆ. ದಾಂಪತ್ಯದಲ್ಲಿ ಶುಭವಾರ್ತೆಯ ಸಾಧ್ಯತೆ ಇರುತ್ತದೆ. ಧನಾಗಮನದಿಂದ ಸಂತಸವಿದೆ. ಆದರೂ ಮಿತಿ ಇರಬೇಕಾದೀತು.

ಮಕರ 
ಹೊಸ ಕಾರ್ಯಗಳಿಗೆ ಅವಸರಿಸದಿರಿ. ಕೆಲಸಕಾರ್ಯಗಳಿಗೆ ವಿಳಂಬವಾಗುತ್ತದೆ. ಶ್ರೀದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಹೆಂಡತಿ ಮಕ್ಕಳ ಸಹಕಾರದಿಂದ ನೆಮ್ಮದಿ ತರಲಿದೆ.

ಕುಂಭ 
ಆಗಾಗ ಚಿಕ್ಕ ಪುಟ್ಟ ಕಿರಿಕಿರಿ ಇದ್ದೇ ಇರುತ್ತದೆ. ವೃತ್ತಿರಂಗದಲ್ಲಿ ತುಸು ನೆಮ್ಮದಿ ಇರುತ್ತದೆ. ಆದರೂ ಕಾರ್ಯಒತ್ತಡ ವಿರುತ್ತದೆ. ಬಂಧುಮಿತ್ರರ ಆಗಮನದಿಂದ ಸಂತಸ ವಿರುತ್ತದೆ.

ಮೀನ 
ನೆಂಟಸ್ತಿಕೆ ವಿಚಾರದಲ್ಲಿ ಮುಂದುವರಿಯಿರಿ. ಕಾರ್ಯಸಾಧನೆಯಾಗಲಿದೆ. ಉದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಲ್ಲೇ ಸಮಾಧಾನ ಸಿಗಲಿದೆ. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು.