ಕುಮಟಾ : ಸಮಾಜದ ವಿದ್ಯಾವಂತ ಯುವಕ ಯುವತಿ ವಿದ್ಯಾವಂತರಲ್ಲಿ ಸಚ್ಛಾರಿತ್ರ, ಸುಸಂಸ್ಕøತ ಸಮಾಜ ನಿರ್ಮಾಣಕ್ಕಾಗಿ ವರ್ಷಂಪ್ರತಿಯಂತೆ ಜ್ಞಾನಸತ್ರ ಕಾರ್ಯಾಗಾರವನ್ನು ಕಳೆದ ತಾ: 25 ಮತ್ತು 26 ನವೆಂಬರ 2018 ರಂದು ಕುಮಟಾದ ಶ್ರೀ ಮಹಾಲಸಾ ಕಲಾಕ್ಷೇತ್ರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ದ್ವಿದಿನಾತ್ಮಕ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಆಯೋಜಿಸಲಾಗಿತ್ತು.

ದಿನಾಂಕ : 25-11-2018ರ ರವಿವಾರ ಮುಂಜಾನೆ ಶ್ರೀ ಮಠದ ಅಧ್ಯಕ್ಷರಾದ ಶ್ರೀ ವಸುದೇವ ಯಶ್ವಂತ ಪ್ರಭು ರವರ ಅಧ್ಯಕ್ಷತೆಯಲ್ಲಿ, ಸ್ಥಳೀಯ ಡಾ|| ಎ. ವಿ. ಬಾಳಿಗಾ ವಿಜ್ಞಾನ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|| ಎನ್. ಕೆ. ನಾಯಕ ಇವರ ಮುಖ್ಯ ಅತಿಥ್ಯದಲ್ಲಿ ವಿವಿಧ ಕೇಂದ್ರಗಳಲ್ಲಿ ನೂರಾರು ಇಂತಹ ಶಿಬಿರಗಳನ್ನು ಆಯೋಜಿಸಿ ಕಲಿಕೆಯಲ್ಲಿ ಗರಿಷ್ಟ ಸಾಧನೆಗೆ ಪೂರಕವಾಗುವ ಮೌಲ್ಯಗಳೊಂದಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳನ್ನು ಜರುಗಿಸಿ ಸಹಸ್ರ – ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಹುಬ್ಬಳ್ಳಿಯ ಶ್ರೀ ರಾಮದಾಸ ಶಾನಭಾಗ, ಬೆಂಗಳೂರಿನ ಶ್ರೀ ರಾಜೇಶ ನಾಯಕ ಇವರ ಉಪಸ್ಥಿತಿಯಲ್ಲಿ ಉದ್ಘಾಟನೆಯನ್ನು ಈಶ ಸ್ತವನ, ದೀಪ ಪ್ರಜ್ವಲನದಿಂದ ಶುಭಾರಂಭಗೊಳಿಸಲಾಯಿತು. ಸೇವಾವಾಹಿನಿ ಅಧ್ಯಕ್ಷರಾದ ಶ್ರೀ ಕಿರಣ ಪ್ರಭು ರವರಿಂದ ಸ್ವಾಗತ ಪರಿಚಯವಾದ ನಂತರ, ಅತಿಥಿ ಡಾ|| ಎನ್. ಕೆ. ನಾಯಕ ರವರು ವಿದ್ಯೆಯ ಮಹತ್ವ, ಜ್ಞಾನಾರ್ಜನೆ, ಸತತಾಭ್ಯಾಸದ ಕುರಿತು ವಿವೇಕವಾಣ ಯೊಂದಿಗೆ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ವಸುದೇವ ಪ್ರಭು ರವರು ಸೇವಾವಾಹಿನಿಯ ಕಾರ್ಯ ಸಾಧನೆ, ಸಮಾಜೋನ್ಮುಖಿ ಕಾರ್ಯಗಳನ್ನು ಶ್ಲಾಘಿಸಿ ಶುಭ ಕೋರಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ನಿರ್ಮಲಾ ಪ್ರಭು ಹಾಗೂ ಶ್ರೀ ಪುರುಷೋತ್ತಮ ನಾಯಕ ಇವರು ನೆರವೇರಿಸಿದರು. ನಂತರ ಕಾರ್ಯಾಗಾರವು ಆರಂಭಗೊಂಡಿತು. ಆ ದಿನ ಯಶಸ್ಸಿನ ಪಥ ಸಂಚಲನ, ನಿರ್ದಿಷ್ಟ ಗುರಿ, ಅಚಲ ಪ್ರಯತ್ನ, ಶ್ರವಣ, ಚಿಂತನ, ಮಂಥನ, ಸಂವಾದ ಕಲೆ, ಕಲಿಕೆಯ ಹಂತಗಳು, ಅಭ್ಯಾಸ ಕಲೆ ಕುರಿತು ದೃಕ್ ಶ್ರವಣ ಉಪಕರಣಗಳೊಂದಿಗೆ ಕಲಿ-ನಲಿಯೊಂದಿಗೆ ಜರುಗಿತು. ಸಾಯಂಕಾಲ ಕುಮಟಾ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಪ್ರವೀಣಕುಮಾರ ಬಸ್ರೂರ ಇವರಿಂದ ವಿಶೇಷ ಪ್ರಾತ್ಯಕ್ಷಿಕೆಯೊಂದಿಗೆ ಅರಣ್ಯ ಸಂಪತ್ತು-ಸಂರಕ್ಷಣೆ, ಪರಿಸರ ಮಾಲಿನ್ಯದ ಕುರಿತು, ಕೆನರಾ ಬ್ಯಾಂಕ್ ಉದ್ಯೋಗಿ ಶ್ರೀ ಗಣೇಶ ಭಟ್ಟರಿಂದ ಸಂವಹನಾ ಚಾತುರ್ಯ, ಜ್ಞಾನ ಸಂಪರ್ಕ, ಗೆಳೆತನದ ಕುರಿತು ಬಹು ಸುಂದರವಾಗಿ ಶಿಬಿರವು ಮುನ್ನಡೆಯಿತು.

RELATED ARTICLES  ಅಪರಿಚಿತ ಶವ ಪತ್ತೆ

ಮರುದಿನ ಸೋಮವಾರ ತಾ: 26-11-2018 ರಂದು ಮುಂಜಾನೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಮದಾಸ ಶಾನಭಾಗ, ಶ್ರೀ ರಾಜೇಶ ನಾಯಕ ರವರು ಅಭ್ಯಾಸ ಕಲೆ, ಶಾರೀರಿಕ ಬೆಳವಣ ಗೆ, ಆರೋಗ್ಯ, ಸ್ವಚ್ಛತೆ, ಆಟೋಟ, ನೈತಿಕ, ಆಧ್ಯಾತ್ಮಿಕ ಚಿಂತನ, ಜವಾಬ್ದಾರಿಯುತ ಕಾರ್ಯಾಚರಣೆ, ಸಾರಿಗೆ ನಿಯಮಗಳು, ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ಬಗೆ, ಪರೀಕ್ಷೆಗಳನ್ನು ಎದುರಿಸುವ ದಶಮುಖಗಳು, ಸ್ಪರ್ಧಾತ್ಮಕ ಪರೀಕ್ಷೆ, ವೃತ್ತಿ ಶಿಕ್ಷಣ ಕುರಿತು ಶಿಬಿರಾರ್ಥಿಗಳನ್ನು ಹುರಿದುಂಬಿಸಲಾಯಿತು.

ಸಮಾರೋಪ ಸಮಾರಂಭವು ನಗರದ ಪ್ರತಿಷ್ಠಿತ ಲೆಕ್ಕಪರಿಶೋಧಕ ಶ್ರೀ ರವಿಕಾಂತ ಎಸ್. ಕಾಮತ ರವರ ಅಧ್ಯಕ್ಷತೆ ಹಾಗೂ ಬರ್ಗಿಯ ಶಿಕ್ಷಣ ತಜ್ಞ, ರಾಜ್ಯಪ್ರಶಸ್ತಿ ಶಿಕ್ಷಕ, ಇಂಗ್ಲೀಷ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ದತ್ತಾತ್ರಯ ಜಿ. ಪಂಡಿತ ರವರಿಂದ ಜರುಗಿತು. ಶಿಬಿರಾರ್ಥಿಗಳು, ಪಾಲಕ ನಾಗರಿಕರು ತಮ್ಮ ಅನುಭವಗಳನ್ನು ಪ್ರಕಟಿಸಿದ ನಂತರ, ಶ್ರೀ ದತ್ತಾತ್ರಯ ಪಂಡಿತ ರವರು ವರ್ತಮಾನ ಪರಿಸ್ಥಿತಿಯಲ್ಲಿ ಶಿಕ್ಷಣ ಪದ್ಧತಿ, ಅದಕ್ಕನುಗುಣವಾಗಿ ನಮ್ಮ ಕಾರ್ಯಚಟುವಟಿಕೆಗಳು ಪೂರ್ವ ತಯಾರಿ ಕುರಿತು ವಿವರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಮುಕುಂದ ಶಾನಭಾಗ, ಹೆಗಡೇಕರ ಜೀವನ ಶೈಲಿ, ಕಾರ್ಯಾಗಾರದ ಉದ್ದೇಶದ ಕುರಿತು ಹಾಸ್ಯಭರಿತ ಉದಾಹರಣೆಯೊಂದಿಗೆ ವಿವರಿಸಿದ ನಂತರ ಅಧ್ಯಕ್ಷೀಯ ನುಡಿಗಳಲ್ಲಿ ಶ್ರೀ ರವಿಕಾಂತ ಕಾಮತರವರು ಶರವೇಗದಲ್ಲಿ ಬದಲಾವಣೆಯಾಗುತ್ತಿರುವ ಸಮಾಜದಲ್ಲಿಯ ಶಿಷ್ಟ-ಅರಿಷ್ಟ ಚಟುವಟಿಕೆಗಳು ನಮ್ಮ ಜಾಗ್ರತೆ, ಚಿಂತತ, ಸತತಾಭ್ಯಾಸದ ಕುರಿತು ವಿವರಿಸಿದ ನಂತರ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸುಸಂಪನ್ನಗೊಂಡಿತು. ನಿರೂಪಕರ ವಾಕ್‍ಚಾತುರ್ಯವು, ಉಟೋಪಚಾರದ ವ್ಯವಸ್ಥೆಯು ಶ್ಲಾಘನೀಯ, ಪ್ರಶಂಸನೀಯ, ಅಭಿನಂದನೀಯವಾಗಿತ್ತು.

RELATED ARTICLES  ಉತ್ತರಕನ್ನಡದಲ್ಲಿ ಒಂದು ಸಾವಿರದ ಗಡಿ ದಾಟಿದ ಒಟ್ಟೂ ಕೋವಿಡ್ ಪಾಸಿಟಿವ್ ಸಂಖ್ಯೆ.

03
ಕಾರ್ಯಕ್ರಮದಲ್ಲಿ ಯುವ ಸೇವಾವಾಹಿನಿಯ ಸದಸ್ಯರಾದ ಶ್ರೀ ಅಜಿತ ಶಾನಭಾಗ, ಶ್ರೀ ಪ್ರಸಾದ ನಾಯಕ, ಶ್ರೀ ಕಮಲಾಕರ ಶಾನಭಾಗ, ಶ್ರೀ ಸುನೀಲ ಬಾಳಗಿ, ಶ್ರೀ ಪುರುಷೋತ್ತಮ ನಾಯಕ, ಶ್ರೀ ಸುಮಂತ ಆಚಾರ್ಯ, ಶ್ರೀ ಪ್ರಸಾದ ಕಾಮತ, ಶ್ರೀ ಪ್ರಶಾಂತ ಶಾನಭಾಗ, ಶ್ರೀ ಕೇಶವ ಕಾಮತ, ಶ್ರೀ ವಿರಾಜ ಬಾಳೇರಿ, ಶ್ರೀ ಕ್ರಷ್ಣ ನಾಯಕ, ಶ್ರೀ ಗುರುದಾಸ ಶಾನಭಾಗ, ಶ್ರೀ ವಿಶಾಲ ಬಾಳಗಿ, ಶ್ರೀ ರಘುವೀರ ಶಾನಭಾಗ, ಶ್ರೀ ಮಹೇಶ ಪ್ರಭು, ಶ್ರೀ ಕಾರ್ತಿಕ ಶಾನಭಾಗ, ಶ್ರೀ ವಿವೇಕ ಬಾಳಗಿ ಇವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.