ಕುಮಟಾ: ಎನರ್ಜಿ ಎಂಡ್ ವೆಟ್ ಲೆಂಡ್ಸ್ ರೀಸರ್ಚ್ ಗ್ರೂಪ್, ಸೆಂಟರ್ ಫಾರ್ ಎಕೋಲೋಜಿಕಲ್ ಸೈಯನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಯನ್ಸ್ ಬೆಂಗಳೂರು ಮತ್ತು ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಮೂಡುಬಿದಿರೆಯ ಡಾ.ವಿ.ಎಸ್.ಆಚಾರ್ಯ ಆಡಿಟೋರಿಯಂನಲ್ಲಿ ನಡೆದ 11 ನೆಯ ದೈವಾರ್ಷಿಕ ಕೆರೆ ಸಮ್ಮೇಳನ-2018 ರ “ಸಹ್ಯಾದ್ರಿ ಯಂಗ್ ಎಕೋಲೋಜಿಸ್ಟ್ ಪ್ರಶಸ್ತಿ” ಗೆ ಇಲ್ಲಿನ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿಶ್ವಾಸ್ ಪೈ ಮತ್ತು ಶ್ರೀಧರ ಭಟ್ಟ ಪಾತ್ರರಾಗಿದ್ದಾರೆ.
ಅವರ ಪ್ರಸ್ತುತಿಯ ಹೊಲನಗದ್ದೆ ಜೀವವೈವಿಧ್ಯತೆಯ ಅಧ್ಯಯನವು ಸಹ್ಯಾದ್ರಿ ಯುವ ಪರಿಸರ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಫಲಕ, ಪ್ರಶಸ್ತಿ ಪತ್ರ, ನಗದು ಬಹುಮಾನದಿಂದ ಪುರಸ್ಕೃತ ವಿದ್ಯಾರ್ಥಿಗಳಿಗೆ ಮುಖ್ಯಾಧ್ಯಾಪಕ ಎನ್ ಆರ್ ಗಜು, ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗಸ್, ಇ. ಡಬ್ಲ್ಯೂ. ಅರ್. ಜಿ. ಸದಸ್ಯೆ ಗಾಯತ್ರಿ ನಾಯ್ಕ ಅಭಿನಂದಿಸಿದ್ದಾರೆ.