ಭಟ್ಕಳ : ಲಂಚ ಪಡೆಯುವುದೆಂದರೆ ಸಾರಾ ಸಗಟು ಎಂದುಕೊಂಡವರಿಗೆ ಒಂದು ಆಘಾತದ ಸುದ್ದಿ ಇದೆ. ಯಾರ್ಯಾರೆಲ್ಲ ಹೇಗೆ ಲಂಚ ಪಡೀತಿದ್ರು ಎಂದು ಅರಿಯದ ಮುಗ್ದರಿಗೂ ಇದು ಪಾಠವಾಗುವ ತರಹದ ಘಟನೆ ವರದಿಯಾಗಿದೆ.

ಭಟ್ಕಳದ ಹೆಬಳೆ ಗ್ರಾಮದ ಗ್ರಾಮ ಲೆಕ್ಕಿಗ ಅಣ್ಣಯ್ಯ ಲಮಾಣಿ ಎಸಿಬಿ ಬಲೆಗೆ ಬಿದ್ದವರು.

ಗಣಪತಿ ನಾಯ್ಕ ಎನ್ನುವವರಿಂದ ಕೇವಲ ಎರಡು ಸಾವಿರ ರೂಪಾಯಿ ಲಂಚ ಪಡೆಯುವಾಗ ಇವರಮೇಲೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ಪ್ರಗತಿ ಟ್ಯುಟೋರಿಯಲ್ಸ್ ನಲ್ಲಿ ತರಬೇತಿ ಪಡೆದು ಉತ್ತಮ ಸಾಧನೆ ಮಾಡಿದ ಕುಮಾರಿ ಪಲ್ಲವಿ ವಿನಾಯಕ ಭಟ್

ಭಟ್ಕಳದ ಹೆಬಳೆ ಗ್ರಾಮದ ಗ್ರಾಮ ಲೆಕ್ಕಿಗ ಅಣ್ಣಯ್ಯ ಲಮಾಣಿ ತೀರಿಹೋದವರ ಹೆಸರನ್ನು ಕಡಿಮೆ ಮಾಡಲು ಲಂಚ ಕೇಳಿದ ಎನರನಲಾಗಿದೆ..

ಗಣಪತಿ ನಾಯ್ಕ ಎನ್ನುವವರು ಮೃತರ ಹೆಸರನ್ನ ಕಡಿಮೆ ಮಾಡಿಮಾಡೊದಕ್ಕೆ ಅರ್ಜಿ ನೀಡಿದ್ದರು.

ಹೆಸರು ಕಡಿಮೆ ಮಾಡಲು ೨ ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಗ್ರಾಮಲೆಕ್ಕಿಗನ ವಿರುದ್ಧ ಎಸಿಬಿ ಗೆ ದೂರು ನೀಡಿದ್ದು ಈ ಹಿನ್ನಲೆಯಲ್ಲಿ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

RELATED ARTICLES  ಸಭೆಗೆ ಹಾಜರಾಗದೇ ಗೈರಾದ ಕಾರಣಕ್ಕೆ ಜಿಲ್ಲೆಯ 22 ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ

ಅದೇನೇ ಇರಲಿ ಸತ್ತವರ ಹೆಸರು ಕಡಿಮೆ ಮಾಡಲೂ ಲಂಚ ಕೊಡಬೇಕಾಯ್ತೇ ಎಂಬ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.