ಅಂಕೋಲಾ : ನಮ್ಮ ಸಂವಿಧಾನ ನಿರ್ಮಾತೃರು ಇಡೀ ಜಗತ್ತು ಮೆಚ್ಚುವ ರಾಜ್ಯಾಂಗ ರೂಪಿಸಿದ್ದಾರೆ.ದೇಶವನ್ನು ಕಲ್ಯಾಣ ಸುಖೀ ರಾಜ್ಯ ವೆಂದು ನಿರ್ಮಾಣ ಮಾಡುವ ಸತ್ಯ ಸಂಕಲ್ಪ ಮಾಡಿದ್ದೇವೆ.ನಮ್ಮ ಸಂವಿಧಾನದ ವೇದಿಕೆಯಲ್ಲಿ ಉಲ್ಲೇಖಿಸಿದಂತೆ “ಭಾರತೀಯ ಪ್ರಜೆಗಳಾದ ನಾವು” ಎಂಬ ವಾಕ್ಯ ದೇಶವನ್ನು ಭಾವನಾತ್ಮಕವಾಗಿ ರೂಪಿಸಿದೆ. ಯುವ ಸಮುದಾಯ ಈ ನೆಲದ ಮೂಲಭೂತ ಕಾನೂನಿನ ಅರಿವನ್ನು ಹೊಂದುವ ಮೂಲಕ ದೇಶದ ಆಡಳಿತ ಪ್ರಜೆಗಳಾಗಬೇಕು. ಎಂದು ಉಪನ್ಯಾಸಕ ಉಲ್ಲಾಸ ಹುದ್ದಾರ ಅಭಿಪ್ರಾಯ ಪಟ್ಟರು.
ಸ್ಥಳೀಯ ಜಿ.ಸಿ ಕಾಲೇಜಿನ ಯುನಿಯನ ವಿಭಾಗದ ವತಿಯಿಂದ ನಡೆದ ‘ಸಂವಿಧಾನ ದಿನಾಚರಣೆ’ಯಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.ಆರಂಭದಲ್ಲಿ ಹಿರಿಯ ಉಪನ್ಯಾಸಕಿ ಶ್ರೀಮತಿ ಸುಜಾತಾ ಲಾಡ್ ಸ್ವಾಗತಿಸಿದರು. ಕೊನೆಯಲ್ಲಿ ಇಂಗ್ಲೀಷ ಉಪನ್ಯಾಸಕ ದರ್ಶನ ಕುಮಾರ ನಾಯಕ ವಂದಿಸಿದರು.ಕಚೇರಿಯ ಅಧಿಕ್ಷಕಿ ಶ್ರೀಮತಿ ಭವಾನಿ ಪಾಲೇಕರ ಉಪಸ್ಥಿತರಿದ್ದರು. ಯನಿಯನ್ ಉಪಾಧ್ಯಕ್ಷ ಉಪನ್ಯಾಸಕ ನಾಗರಾಜ ದೇವಗಿಕರ, ಸುಬ್ರಹ್ಮಣ್ಯ ಭಟ್, ಮೊಹನ ದಿವಗಿಕರ ಪಧ್ಮನಾಭ ಪ್ರಭು, ಕಚೇರಿ ಸಹಾಯಕ ನಾಗರಾಜ ಶೆಟ್ಟಿ ಶ್ರೀಮತಿ ಛಾಯಾ ನಾಯಕ ಮೊದಲಾದವರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.