ಕುಮಟಾ : ಕರ್ತವ್ಯದ ನಿರ್ವಣೆಗಾಗಿ ಡಿಡಿಎಲ್‍ಆರ್ ಕಚೇರಿಗೆ ತೆರಳಿದ್ದ ಕಾರವಾರ ವರದಿಗಾರ ಉದಯ ಬರ್ಗಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಡಿಡಿಎಲ್‍ಆರ್ ವೇಣುಗೋಪಾಲ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕಿನ ಪತ್ರಕರ್ತರು ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿನೀಡಿ ಆಗ್ರಹಿಸಿದ್ದಾರೆ.
ಸುದ್ದಿ ಮತ್ತು ಮಾಹಿತಿಗಾಗಿ ಡಿಡಿಎಲ್‍ಆರ್ ಕಚೇರಿಗೆ ತೆರಳಿದ್ದ ವರದಿಗಾರ ಉದಯ ನಾಯ್ಕ ಬರ್ಗಿ ಅವರನ್ನು ನಿಂದಿಸಿದ ಡಿಡಿಎಲ್‍ಆರ್ ವೇಣುಗೋಪಾಲ್ ಅವರ ಅನುಚಿತ ವರ್ತನೆ ಖಂಡನೀಯ. ಮಾಧ್ಯಮದ ಪ್ರತಿನಿಧಿ ಕಚೇರಿಯೊಳಕ್ಕೆ ಪ್ರವೇಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಡಿಎಲ್‍ಆರ್ ವೇಣುಗೋಪಾಲ್ ಅಸರ್ಭಯವಾಗಿ ವರ್ತಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶಂಕರ ಶರ್ಮಾ, ಎಂ.ಜಿ.ನಾಯ್ಕ, ಅನ್ಸಾರ್ ಶೇಖ್, ನಾಗರಾಜ ಪಟಗಾರ,ಸುಬ್ರಾಯ ಭಟ್, ರಾಘವೇಂದ್ರ ದಿವಾಕರ್, ಜಿ.ಡಿ.ಶಾನಭಾಗ, ಚರಣರಾಜ್ ನಾಯ್ಕ, ಪ್ರವೀಣ ಹೆಗಡೆ, ಅಮರನಾಥ ಭಟ್, ದಿನೇಶ ಗಾಂವ್ಕರ್, ಮಯೂರ ಪಟಗಾರ, ಸಂತೋಷ ನಾಯ್ಕ, ನಟರಾಜ ಮುಕ್ರಿ, ವಿಶ್ವನಾಥ ನಾಯ್ಕ, ಯೋಗೇಶ ಮಡಿವಾಳ, ಅನಿಲ ಆಚಾರಿ, ವಿನೋದ ಹರಿಕಂತ್ರ ಮತ್ತಿತರರು ಇದ್ದರು.