ಬೆಂಗಳೂರು[ನ.29]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಭಾರತದ ಭೂ ವೀಕ್ಷಣಾ ಉಪಗ್ರಹವೊಂದರ ಜೊತೆ 8 ದೇಶಗಳ 30 ಸಣ್ಣ ಉಪಗ್ರಗಳನ್ನು ಇಂದು ಉಡಾವಣೆ ಮಾಡಲಿದೆ ಎಂದು ವರದಿಯಾಗಿದೆ.

ಈ ಮಹತ್ವಾಕಾಂಕ್ಷಿ ಉಡಾವಣೆಗೆ ಬುಧವಾರ ಮುಂಜಾನೆ 5.58 ನಿಮಿಷದಿಂದ ಕೌಂಟ್ಡೌನ್ ಆರಂಭವಾಗಲಿದ್ದು, ಗುರುವಾರ ಮುಂಜಾನೆ 9.58 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ನೆಲೆಯಿಂದ ಉಪಗ್ರಹ ಉಡಾವಣೆಗೊಳ್ಳಲಿದೆ.

RELATED ARTICLES  ಶ್ರೀ ದೇವಿ ಪಾರಾಯಣ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮ

ಪಿಎಸ್ಎಲ್ವಿ- ಸಿಎ ಉಡಾವಣಾ ವಾಹಕವು 380 ಕೆ.ಜಿ. ತೂಕದ ಎಚ್ವೈಎಸ್ಐಎಸ್ ಉಪಗ್ರಹ ಹಾಗೂ 261.5 ಕೆ.ಜಿ. ತೂಕದ ಇತರ ದೇಶಗಳ 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ತಿಳಿದುಬಂದಿದೆ.

RELATED ARTICLES  ಕಾರವಾರದಲ್ಲಿ ಜೈವಿಕ ಇಂಧನ ಸಪ್ತಾಹ ಆಚರಣೆಯ ಅಂಗವಾಗಿ ನಡೆಯಲಿವೆ ವಿವಿಧ ಸ್ಪರ್ಧೆಗಳು