ಬೆಂಗಳೂರು: 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಪ್ರಕಟಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಿನ 63 ಗಣ್ಯರಿಗೆ ಪ್ರತಿಷ್ಠಿತ ಪುರಸ್ಕಾರ ಪ್ರಕಟಿಸಿದೆ. ನವೆಂಬರ್ 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಸಾಧಕರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ವರದಿಯಾಗಿದೆ .

RELATED ARTICLES  ಬುಲೆಟ್ ರೈಲು ಯೋಜನೆ ಮಿತ್ರ ರಾಷ್ಟ್ರ ಜಪಾನ್ ಭಾರತಕ್ಕೆ ನೀಡಿರುವ ಅಮೂಲ್ಯ ಉಡುಗೊರೆ

ಸಾಮಾನ್ಯವಾಗಿ ನವೆಂಬರ್‌ ಒಂದರಂದು ಪ್ರದಾನವಾಗುವ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದ ಹಿನ್ನೆಲೆಯಲ್ಲಿ ತಡವಾಗಿ ಪ್ರಕಟಿಸಲಾಗಿದೆ ಎನ್ನಲಾಗಿದೆ.

ಪ್ರತಿವರ್ಷ ನವೆಂಬರ್1 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು,‌ನುಡಿ, ಭಾಷೆ, ರಂಗಭೂಮಿ, ಚಲನಚಿತ್ರ, ವೈದ್ಯಕೀಯ, ಕ್ರೀಡೆ, ಸಮಾಜಸೇವೆ, ಪತ್ರಿಕೋದ್ಯಮ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಈ ವರ್ಷ 63 ನೇ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಷ್ಟೇ ಸಂಖ್ಯೆ ಯ ಗಣ್ಯರಿಗೆ ಪ್ರಶಸ್ತಿ ನೀಡಲಾಗುತ್ತದೆ.

RELATED ARTICLES  ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನಕ್ಕೆ ಸಂಬಂಧಿಸಿ ಪ್ರಕರಣ ದಾಖಲು!

ಹಿರಿಯ ನಟ ಜೈ ಜಗದೀಶ್, ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್ ಆಳ್ವಾ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಲ್.ದತ್ತು ಸೇರಿದಂತೆ 63 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದುಬಂದಿದೆ.

2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಇಂತಿದೆ:

a1
a2
a3