ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಮೂರು ಸಂಧ್ಯಾ ಕಾಲಗಳಾದ ಪ್ರಾತಃ ಸಂಧ್ಯೆ, ಮಧ್ಯಾಹ್ನಿಕ, ಸಾಯಂ ಸಂಧ್ಯೆ ಎಂಬ ತ್ರಿಸಂಧ್ಯೆಗಳ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ.

?ಹಿನ್ನೆಲೆ

ಸಂಧ್ಯಾವಂದನೆ ಮಾಡುವ ಸಂಪ್ರದಾಯ ಬಹಳ ಪ್ರಾಚೀನ ಕಾಲದಿಂದಲೂ ಇದ್ದಂತೆ ಕಾಣುತ್ತದೆ. ರಾಮಾಯಣಮಹಾಕಾವ್ಯದಲ್ಲಿ ವಿಶ್ವಾಮಿತ್ರ ಋಷಿಯು ಶ್ರೀ ರಾಮನಿಗೆ ಬೆಳಗಾಯಿತು ಏಳು ಸಂಧ್ಯಾ ವಿಧಿಗಳನ್ನು ಮಾಡು ಎಂದು ಎಚ್ಚರಿಸುತ್ತಾನೆ. ಸಂಧ್ಯಾವಂದನೆಗೆ ತ್ರಿಕಾಲವನ್ನು ಅಥವಾ ತ್ರಿಸಂಧ್ಯೆಯನ್ನು ಹೇಳಿದೆ; ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ. ಅದಕ್ಕೆ ತಕ್ಕಂತೆ ಮಂತ್ರಗಳನ್ನೂ ಜೋಡಿಸಿದೆ. ಸಧ್ಯದಲ್ಲಿ ಎರಡು ಕಾಲದಲ್ಲಿ ಮಾತ್ರ ಆಚರಣೆ ಮಾಡುವುದು ರೂಢಿಯಲ್ಲಿರುವುದು – ಬೆಳಗಿನ ಮತ್ತು ಮದ್ಯಾಹ್ನದ ಕ್ರಿಯೆಗಳನ್ನು ಒಟ್ಟಿಗೆ ಸೇರಿಸಿ ಬೆಳಗಿನಲ್ಲಿ ಅಥವಾ ಮಧ್ಯಾಹ್ನ ಆಚರಿಸುವುದು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಒಮ್ಮೆ ಸಂಧ್ಯಾವಂದನೆ ಮಾಡುವುದು. ಶ್ರೌತ ಸ್ಮಾರ್ತ ಪದ್ದತಿಗಳನ್ನೊಳಗೊಂಡ ಈ ಕ್ರಿಯೆಗಳು ನಿತ್ಯ ಕರ್ಮಗಳಲ್ಲಿ ಸೇರಿದೆ. ಇದನ್ನು ಆಚರಿಸುವುದರಿಂದ ಮನಸ್ಸು ಅಥವಾ ಚಿತ್ತ ಶುದ್ಧಿಯಗುವುದೆಂಬುದು ಶ್ರೀ ಶಂಕರರ ಅಭಿಪ್ರಾಯ. ಈ ಕ್ರಿಯೆ ಮಾಡುವುದರಿಂದ ಪುಣ್ಯವೂ ಇಲ್ಲ : ಬಿಡುವುದರಿಂದ ಪಾಪವೂ ಇಲ್ಲ. ಆದರೆ ಬಿಡುವುದರಿಂದ ಕರ್ತವ್ಯ ಲೋಪವಾಗುವುದೆಂದು ಹೇಳಿದೆ. ಈ ಸಂಧ್ಯಾವಂದನಾದಿ ನಿತ್ಯ ಕ್ರಿಯೆಗಳು ಅದರ ಹೆಸರೇ ಹೇಳುವಂತೆ ಭಗವಂತನಿಗೆ ಧನ್ಯವಾದವನ್ನು ಅರ್ಪಿಸುವ ಕ್ರಿಯೆಗಳಾಗಿವೆ.

RELATED ARTICLES  16.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

ಸಂಧ್ಯಾವಂದನೆಯಲ್ಲಿ ( ಸಂಧ್ಯಾವಂದನೆ ಮಂತ್ರಸಂಕ್ಷಿಪ್ತ ರೂಪ) ಗಾಯತ್ರೀ ಜಪ ಬಹಳ ಮುಖ್ಯವಾದುದರಿಂದ ಸರಳವಾದ ಜಪಯೋಗವಾಗಿ ಉಪನಯನ ನಂತರ ಪ್ರತಿಯೊಬ್ಬರೂ ಅಬ್ಯಾಸ ಮಾಡಬೇಕೆಂದು ವಿಧಿಸಿರುವಂತೆ ಕಾಣುತ್ತದೆ.. ಆದರೆ ಕ್ರಮೇಣ ಅದನ್ನು ವಿಸ್ತರಿಸಿದ ಈ , ಸಂಧ್ಯಾವಂದನ ಪೂರ್ಣಪಾಠ ದಲ್ಲಿ ಹೆಚ್ಚು ತಾಂತ್ರಿಕ ವಿಧಿಗಳಿದ್ದು ಗಾಯತ್ರೀ ಉಪಾಸನಾ ವಿಧಿಯನ್ನು ಹೇಳಿದೆ. ಆದ್ದರಿಂದ ಪೂರ್ಣ ಸಂದ್ಯಾವಂದನೆ ಮಾಡುವವರು ಸರಿಯಾದ ಮಾರ್ಗದರ್ಶನ ಪಡೆದು ಸ್ವಲ್ಪವೂ ತಪ್ಪಿಲ್ಲದಂತೆ ಲೋಪವಾಗದಂತೆ ಮಾಡಬೇಕು.

RELATED ARTICLES  ಶಿಕ್ಷಕರ ಅರ್ಹತಾ ಪರೀಕ್ಷೆ ಬರೆದವರಿಗೆ ಗುಡ್ ನ್ಯೂಸ್..!

?ಮಾಡುವ ಕ್ರಮ

ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.