ಮಂಡ್ಯ: ಜಿಲ್ಲೆಯ ಹಲವೆಡೆ ಭೂಮಿ ಒಂದು ಕ್ಷಣ ಕಂಪಿಸಿದ ಅನುಭವವಾಗಿದ್ದು, ಗಾಬರಿಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಎನ್ನಲಾಗಿದೆ.

ಇಂದು ನಗರದ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಸುಮಾರು 3.42ರ ವೇಳೆ ಜಿಲ್ಲೆಯಲ್ಲಿ ಭಾರೀ ಶಬ್ದವೊಂದು ಕೇಳಿ ಬಂದಿತ್ತು. ದೊಡ್ಡದಾದ ಶಬ್ದ ಕೇಳಿ ಗಾಬರಿಗೊಂಡ ಜನ ಮನೆಯಿಂದ ಹೊರಗೆಬಂದಿದ್ದಾರೆ. ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವಾಗುತ್ತಿದೆ ಎಂದು ಜನರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ.

ಅಲ್ಲದೇ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಪಾಂಡವಪುರ ತಾಲೂಕುಗಳಲ್ಲಿಯೂ ಕ್ಷಣಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಆದರೆ ಅಕ್ರಮ ಗಣಿಗಾರಿಕೆಯಲ್ಲಿ ನಿಷೇಧಿತ ಸ್ಫೋಟಕ ಬಳಕೆ ಶಂಕೆ ಎನ್ನಲಾಗಿತ್ತಿದೆ. ಇದು ಸ್ಫೋಟಕವೋ ಅಥವಾ ಕಂಪನವೋ ಇನ್ನೂ ತಿಳಿದುಬಂದಿಲ್ಲ.ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
.

RELATED ARTICLES  ಅಂತರ್ ರಾಜ್ಯ ಕಳ್ಳನ ಬಂಧನ