ಕುಮಟಾ:ಅಂಕೋಲಾದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್‍ ಟ್ರಸ್ಟ್ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಚಿಮ್ಮಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ವಸುಧಾ ಪ್ರಭು ಮರಾಠಿ ಭಾಷಣ, ಶಿಲ್ಪಾ ಪಟಗಾರರಂಗೋಲಿ, ಚಿನ್ಮಯಿ ಭಂಡಾರಿ ಸಂಗಡಿಗರುಕಲೋತ್ಸವ ನೃತ್ಯ (ವೀರಗಾಸೆ)ದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆತಮ್ಮ ಹೆಸರನ್ನು ದಾಖಲಿಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 699 ಜನರಿಗೆ ಕೊರೋನಾ ಪಾಸಿಟಿವ್..!

ಉಳಿದಂತೆ, ಶ್ರೇಯಾ ಶಾನಭಾಗ ಧಾರ್ಮಿಕ ಪಠಣ, ನೇಹಾ ಶಾನಭಾಗ ಸಂಸ್ಕøತ ಭಾಷಣ, ತೇಜಸ್ವಿನಿ ಶಾನಭಾಗ ತುಳು ಭಾಷಣದಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿದರೆ, ಸುದಿತಿಕಾಮತಕೊಂಕಣಿ ಭಾಷಣದಲ್ಲಿತೃತೀಯ ಸ್ಥಾನ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿತಂದಿದ್ದಾರೆ.

RELATED ARTICLES  ಬೈಕ್ ನಿಂದ ಬಿದ್ದ ಯುವಕ ಸಾವು.

ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ಪಾಲಕರು ಶ್ಲಾಘಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.